ಒಂದು ದಿನ ಚಿದಾನಂದ ಹೊರಗಡೆ ನದೀ ತೀರಕ್ಕೆ ಹೋದಾಗ- ಗುರುಗಳು ಮಲಗುತ್ತಿದ್ದ ಕೋಣೆಗೆ ಬಂದು ನೋಡುತ್ತಾರೆ.ಆ ಕೋಣೆ ಪದ್ಯಗಳನ್ನು ಬರೆದ ತಾಳೆಗರಿಗಳಿಂದ ಜೋಡಿಸಲ್ಪಟ್ಟಿತ್ತು. ಆದರೆ ಯಾವುದೇ ಪದ್ಯಗಳಿಗೆ ಅಂಕಿತವಿರಲಿಲ್ಲಾ.ಗುರುಗಳು ಒಂದೊಂದೇ ಪದ್ಯಗಳನ್ನು ನೋಡುತ್ತಾ ಹೋದಂತೆ, ಸಾಹಿತ್ಯಾಭ್ಯಾಸವಿಲ್ಲದೆ ಆತ ಬರೆದ ಅದ್ಭುತ ಪದ್ಯಗಳ ಪದಗುಚ್ಛಗಳನ್ನು ಕಂಡು- “ವ್ಹಾ ವ್ಹಾ” ಎಂದರು.ಅಷ್ಟರಲ್ಲಿ ಬಂದ ಚಿದಾನಂದನಲ್ಲಿ “ಯಾವಾಗ ಇದನ್ನು ಬರೆದೆ? ಬಹು ಚೆನ್ನಾಗಿದೆ ಅಲಂಕಾರ, ಛಂದಸ್ಸು ಸೊಗಸಾಗಿ ಮೂಡಿ ಬಂದಿದೆ. ಹಿಂದಿನ ಜನ್ಮದ ಸಾಹಿತ್ಯಾಭ್ಯಾಸದ ಫಲವಿತ್ತು. ತಾಯಿ ಜಗಧಾಂಬೆ ನಿನಗೆ ಸನ್ಮಂಗಲ ಉಂಟು ಮಾಡಲಿ ಎಂದು ಹರಸಿದರು.
“ನನಗೆ ತೋಚಿದುದನ್ನು ಗೀಚಿದೇನೆ” ಎಂದು ಚಿದಾನಂದ ಹೇಳಿದಾಗ. “ಕಂದಾ ಚಿದಾನಂದಾ, ಸಾಹಿತ್ಯ ಸೃಷ್ಟಿ ಎಲ್ಲರಿಂದಲ್ಲೂ ಸಾಧ್ಯವಿಲ್ಲ. ಸರಸ್ವತಿ ಒಲಿಯುವುದು ಜನ್ಮ ಜನ್ಮಾಂತರಗಳ ಸಂಸ್ಕಾರ ಬಲದಿಂದ ಓದಿದವರೆಲ್ಲಾ- ವ್ಯಾವಹಾರಿಕವಾಗಿ ವಿವರಿಸುತ್ತಾರೆ. ಕೀರ್ತಿ ಹಾಗೂ ಹಣ ಗಳಿಕೆ ಅವರ ಉದ್ದೇಶ- ಅವರು ಸಾಹಿತ್ಯಕವಾಗಿ ಸ್ಪಂದಿಸಲಾರರು.ಸಾಹಿತ್ಯ ಸೃಷ್ಟಿಗೆ ಅಧ್ಯಯನ ಬೇಕು. ಹಾಗೆಂದ ಮಾತ್ರಕ್ಕೆ ಅಧ್ಯಯನ ಗೈದವರೆಲ್ಲಾ ಸಾಹಿತ್ಯವನ್ನು ಸೃಷ್ಟಿಸಿಲ್ಲ. ಬೇರೆಯವರು ಬರೆದುದನ್ನು ನಕಲು ಮಾಡಿ ಬರೆಯುತ್ತಾರೆ. ಅದು ಪುಸ್ತಕ ಜ್ಞಾನ- ಶಾಸ್ತ್ರ ಪಂಡಿತರ ಎಂಜಲು ಆಗಬಾರದು. ಓದಿದವನಿಗೆ ಹಾದಿ ಸಿಕ್ಕಿಲ್ಲಾ ಎಂದಾಗಬಾರದು.
ಅಧ್ಯಯನ ಶೀಲರನ್ನು ಎರಡು ಭಾಗವಾಗಿ ವಿಂಗಡಿಸಬಹುದು.ಮೊದಲನೆಯ ಗುಂಪು, ಅದಕ್ಕೆ “ಕೃತೋಪಾಸ್ತಿಗಳು” ಎಂದರೆ ಕಲಿತ ವಿಧ್ಯೆಯು ಬೀಜವಾಗಿ ಮೊಳೆತು ಅದರಿಂದ ಸಾಹಿತ್ಯ ಸೃಷ್ಟಿಸುವ ಬುದ್ದಿವಂತರು.ಎರಡನೇ ಗುಂಪು “ಅಕ್ಮತೋಪಾಸ್ತಿಗಳು” ಎಂದರೆ ಇವರಿಗೆ ಕಲಿತ ವಿಧ್ಯೆ, ತಮ್ಮ ತಮ್ಮ ಪಾಂಡಿತ್ಯ ಪ್ರದರ್ಶನಕ್ಕೆ ಬುದ್ದಿವಂತಿಗೆ ಮಾತ್ರ ಸೀಮಿತವಾಗಿ ಬರೇ ಪ್ರದರ್ಶನವಾಗುತ್ತದೆ. ಆತ್ಮ ದರ್ಶನಕ್ಕೆ ಇದು ಉಪಯೋಗವಾಗುವುದಿಲ್ಲ ಇವರಿಂದ ಯಾವ ಸಾಹಿತ್ಯವೂ ಸೃಷ್ಟಿಯಾಗುವುದಿಲ್ಲಾ. ಇವರು ಬರೇ ಮಾತನಾಡುತ್ತಾರೆ. ಅವರಿಗೂ ಅರ್ಥವಾಗದುದನ್ನು ಹೇಳಿದರೆ ಕೇಳಿದವರಿಗೆ ಹೇಗೆ ತಾನೇ ಅರ್ಥವಾದಿತು? ನೀನು ಮೊದಲನೆಯ ಗುಂಪಿನ “ಕೃತೋಪಾಸ್ತಿ” ಗೆ ಸೇರಿದವನು. ಬ್ರಹ್ಮ ಜಿಜ್ಞಾಸು ನೀನು.
“ಚಿದಾನಂದಾ ನೀನು ನಂಬಿದ ಹಾಗೂ ನಾನು ನಂಬಿ ಆರಾದಿಸುವ ಆ ಮಹಾತಾಯಿ ಬಗಳಾಮುಖಿಯ ಮಹಾಶೀರ್ವಾದ ಬಲವೇ ಇದಕ್ಕೆ ಕಾರಣ.ಮೊದಲನೆಯ ಗುಂಪು, ಅದಕ್ಕೆ “ಕೃತೋಪಾಸ್ತಿಗಳು” ಎಂದರೆ ಇವರಿಗೆ ಕಲಿತ ವಿಧ್ಯೆ ತಮ್ಮ ತಮ್ಮ ಪಾಂಡಿತ್ಯ ಪ್ರದರ್ಶನಕ್ಕೆ ಬುದ್ದಿವಂತಿಗೆ ಮಾತ್ರ ಸೀಮಿತವಾಗಿ ಬರೇ ಪ್ರದರ್ಶನವಾಗುತ್ತದೆ. ಆತ್ಮ ದರ್ಶನಕ್ಕೆ ಇದು ಉಪಯೋಗವಾಗುವುದಿಲ್ಲ ಇವರಿಂದ ಯಾವ ಸಾಹಿತ್ಯವೂ ಸೃಷ್ಟಿಯಾಗುವುದಿಲ್ಲಾ. ಇವರು ಬರೇ ಮಾತನಾಡುತ್ತಾರೆ. ಅವರಿಗೂ ಅರ್ಥವಾಗದುದನ್ನು ಹೇಳಿದರೆ ಕೇಳಿದವರಿಗೆ ಹೇಗೆ ತಾನೇ ಅರ್ಥವಾಗುದು? ನೀನು ಮೊದಲನೆಯ ಗುಂಪಿನ “ಕೃತೋಪಾಸ್ತಿ”ಗೆ ಸೇರಿದವನ್ನು ಬ್ರಹ್ಮ ಜಿಜ್ಞಾಸು ನೀನು.”ಚಿದಾನಂದಾ ನೀನು ನಂಬಿದ ಹಾಗೂ ನಾನು ನಂಬಿ ಆರಾದಿಸುವ ಆ ಮಹಾತಾಯಿ ಬಗಳಾಮುಖಿಯ ಮಹಾಶೀರ್ವಾದ ಬಲವೇ ಇದಕ್ಕೆ ಕಾರಣ- “ಗುರುಕೃಪೆ” ನಿನಗೆ ಗುರುಸೇವೆಯಿಂದ ಲಭ್ಯವಾಗಿದೆ. ನಿನಗೆ ಸರಸ್ವತಿ ಒಲಿದಿದ್ದಾಳೆ. ಹೀಗೆ ಹಲವು ಜನ್ಮಗಳ ನಿರಂತರ ಅಧ್ಯಯನ ಅನುಭಾವ ಬೆರೆತು ನೀನು ಅವಧೂತ ಮಾರ್ಗದ ಆ ಪರಂಪರೆಯ ಹರಿಕಾರನಾಗಿ.
“ಚಿದಾನಂದಾವಧೂತ” ನೆಂಬ ನಾಮಾಭಿಮಾನದಿಂದ ಭರತ ಖಂಡದಲ್ಲಿ ಜಗದ್ವಿಖ್ಯಾತಿ ಪಡೆಯುವೆ” ಎಂದು ಮನತುಂಬಿ ಆಶೀರ್ವದಿಸಿದರು.” ಗುರು ಸಾಕ್ಷಾತ್ ಪರಬ್ರಹ್ಮ” ಎಂಬುದು ಚಿದಾನಂದನಿಗೆ ತಿಳಿಯಿತು.
(ಮುಂದುವರಿಯುವುದು)
ಸಂಗ್ರಹ: ಸ್ವಾಮಿ ವಿಜಯಾನಂದರು,
ಮೂಲ ಕೃತಿ S.V. ಪಾಟೀಲ ಗುಂಡೂರ ಅವರ “ರಾಜಯೋಗಿ ಶ್ರೀ ಚಿದಾನಂದ ಅವಧೂತರು”.
ಸಂಕಲನ:ಸಿದ್ಧಾರೂಢ ಹಿರೇಮಠ, ನಿತ್ಯಾನಂದ ಧ್ಯಾನ ಮಂದಿರ, ಬೇವಿನಕೊಪ್ಪ.