On 25th May, we directly left to Siddhappaji’s darshan from Udupi to Tattekere, we had informed about our visit to Raju Singhallar, who is currently rendering seva there. Raju had said that since a few days Siddhappaji had not only been silent but was in a complete Digambara sthiti removing the Kaupina he used to wear before and is not allowing anyone to visit him. Siddhappaji had prepared the food for only two people that morning of our visit, but realizing that we were coming to visit through Divyadrishti, Siddhappaji had again started preparing food for six people. We got the entry to Ashram. Siddhappaji sat silently in front of the stove. The curry was boiling on a stove. He made Raju bring 2 dried coconuts with the husk, saying “Hun.. Hun.. Both are same”., he asked Raju to peel one and keep the other back in the same place he had got it from. When Raju peeled it and gave it to Siddhappaji, He started exfoliating the outer shells using the grater. He grated off the fibers completely. The implicit meaning of this act is that when he said both the coconuts are the same, it means though both the coconuts look different yet the water and the pulp inside are the same, that is Jivatma-Shivatma are One. The meaning of exfoliating the shells and cleaning them is an indication that one must get rid of the attachment to the body.
Then He sent everyone out to fill the water tanks and wash vessels, but gestured me to sit there itself. He started to grate the coconut. After a while, taking out some grated coconut, he fed me, it was soft as butter and sweet as nectar. Then he called in everyone and fed each one of them. Then he took out some grapes, washed them two to three times, and gave them to all. He made us aware of the significance of ‘work’. He demonstrated the essence instead of preaching. It reminded me of Bhagavan’s words ‘Do what you say, say what you do’.The curry was boiling, when Raju tried to stir it, Siddhappaji would scold Raju to not stir, and when Raju did not stir, Siddhappaji would ask him to stir. At times he yelled at him in anger, other times he would hit over his head and laugh. Way of an Avadhoota is incomprehensible. When Raju used to ask me hundreds of questions before, I used to tell him that through the Guru seva one receives answers to all the problems and the sadhaks get guidance in the path. For Avadhootas, its Mastaka Jnana (innate knowledge), the ocean of knowledge, not Pustaka Jnana (Book knowledge). Raju had realized that the divine opportunity to do seva of Avadhootas is the fruition of their previous birth’s merits. That which is impossible to understand, describe or elucidate is Avadhootavastha.
He blessed us by giving a fruit. Feeding us Rice and Curry prasad, He signaled us to leave, asking “Will you take leave?”. I folded my hands and prayed, ‘bless me Ajja’. “There is nothing to do, it’s not done, it happens” he replied. One does not perform breathing, it happens on its own, one must restrain the mind and prana. “It will happen, it will happen, everything is already done” He said. We reached the Bevinkoppa Ashram at two o’clock in the night. I phoned Raju at 07.00am to tell him that we had reached, he called back at 8.00am and said that Appaji asked him ‘Have they reached safely?’. Then Raju said that Appaji will speak and handed over the phone to Him. Siddhappaji said, “Did you reach safely?. Everything will be fine”. I said Sharanu Sharanu Sharanarthi, He replied ” Sharanu Sharanu Sharanu Sharanu” and there was silence. Nishyabda (Silence), Nishyabda indeed is Brahma! It’s not doing (performing the action), that which we think we are doing is ‘Aham'(ego). It’s not done, it happens. It’s not coming and going, it’s being. That which is ‘yes’ is a ‘no’, that which is ‘no’ is a ‘yes’. Avadhoota has no Madi-Mailige (purity-impurity). Then one might wonder why Avadhoota Siddhappaji does clean fruit, floor, utensils and ashram. But we must understand that his acts had hidden messages for us that he upheld the tattva ‘work is worship’ by performing the work himself thereby encouraging us to be dutiful and through tiding chores he showed us how Nirmal Mann (pure mind) and Nischal Mann (Steady Mind) are essential in life, and to attain it by cleaning the mind of impurities.
He prepares a variety of curries, vegetable gravies, rice, and healthy potions with the divine touch of his hands, feeds all the devotees, and cleans the dishes also by Himself. Through this, He shows us that during the dissolution, the water covers the entire creation, and nature itself cleanses everything. I was also surprised when Raju said that Siddhappaji had planted grass, vegetables, etc. on the terrace of each building to show that the same situation of growing our own vegetables at homes itself will come in the near future as the price of vegetables and grains will soar very high.
- Namo Nityanandaya
- Swami Vijayananda
- Nityananda Dhyana Mandir, Bevinkoppa
ಅವಧೂತ ಸಿದ್ಧಪ್ಪಾಜಿ ದರ್ಶನ
25ನೇ ತಾರೀಕಿಗೆ ಉಡುಪಿಯಿಂದ ನೇರವಾಗಿ ಅವಧೂತ ಸಿದ್ಧಪ್ಪಾಜಿ ಅವರ ದರ್ಶನಕ್ಕೆ ತಟ್ಟೆಕೆರೆಗೆ ಹೊರಟೆವು, ಅವರ ಸೇವೆಯಲ್ಲಿ ನಿರತನಾಗಿರುವ ಬೆಂಗಳೂರಿನ ರಾಜು ಸಿಂಗ್ರಲ್ಲರಿಗೆ ನಮ್ಮ ಭೇಟಿಯ ಕುರಿತು ಮೊದಲೇ ತಿಳಿಸಿದ್ದೆವು. ಹಲವು ದಿನಗಳಿಂದ ಅವರು ಮಾತು ಕಡಿಮೆ ಮಾಡಿದ್ದಲ್ಲದೆ ಕೌಪೀನ ಕೂಡಾ ಕಳೆದು ದಿಗಂಬರಸ್ಥಿತಿಯಲ್ಲಿ ಇರುವುದಾಗಿ ಯಾರಿಗೂ ಪ್ರವೇಶ ನೀಡುತ್ತಿಲ್ಲವೆಂದು ರಾಜು ತಿಳಿಸಿದ್ದರು. ಸಿದ್ಧಪ್ಪಾಜಿ ಎರಡು ಮಂದಿಗಷ್ಟೇ ಅಡಿಗೆ ಸಿದ್ಧಪಡಿಸಿದ್ದರು ಆದರೆ ನಾವು ಬರುವುದನ್ನು ದಿವ್ಯದೃಷ್ಟಿಯಿಂದ ಅರಿತ ಸಿದ್ಧಪ್ಪಾಜಿ ಮತ್ತೆ ಆರು ಮಂದಿಗಾಗಿ ಅಡುಗೆ ಸಿದ್ಧಪಡಿಸುತ್ತಿದ್ದರು. ಒಳಗೆ ಪ್ರವೇಶ ದೊರೆಯಿತು. ಸಿದ್ಧಪ್ಪಾಜಿ ಮೌನವಾಗಿ ಒಲೆಯ ಮುಂದೆ ಕುಳಿತಿದ್ದರು. ಒಂದು ಒಲೆಯ ಮೇಲೆ ಸಾರು ಕುದಿಯುತ್ತಿತ್ತು, ರಾಜುವಿನಿಂದ 2 ಒಣಗಿದ ಸಿಪ್ಪೆಸಹಿತ ಗುಂಡಗಿನ ತೆಂಗಿನಕಾಯಿಗಳನ್ನು ತರಿಸಿ ಅಕ್ಕಪಕ್ಕದಲ್ಲಿಟ್ಟರು, “ಹೂ ಹೂ ಎರಡೂ ಒಂದೇ” ಎಂದರು. ಬಳಿಕ ಒಂದನ್ನು ಸುಲಿಯಲು ಹೇಳಿ ಒಂದನ್ನು ಇದ್ದ ಸ್ಥಾನದಲ್ಲಿಯೇ ಮರಳಿ ಇಡುವಂತೆ ಹೇಳಿದರು. ಆ ಕಾಯಿಯನ್ನು ಸುಲಿದು ತಂದ ಬಳಿಕ ಅದರ ಮೇಲಿನ ನಾರುಗಳನ್ನು ತೆರೆಮಣೆಯ ಮೇಲಿಟ್ಟು ಕೆರೆಯ ಹತ್ತಿದರು. ಮೇಲಿನ ನಾರುಗಳನ್ನೆಲ್ಲ ಹೆರೆದು ಬಿಟ್ಟರು. ಎರಡೂ ಕಾಯಿಗಳು ಒಂದೆಂದರೆ ಎರಡೂ ಆತ್ಮಗಳು ಒಂದೇ, ಎರಡೂ ಕಾಯಿಗಳು ಬೇರೆಬೇರೆ ಕಂಡರೂ ಒಳಗಿನ ನೀರು ಹಾಗೂ ಕೊಬ್ಬರಿ ಒಂದೇ, ಆತ್ಮ- ಶಿವಾತ್ಮ ಒಂದೇ ಎಂದು ತೋರಿಸಿದರು. ಹೊರಗಿನ ಸೊಟ್ಟೆಯ ಮೇಲಿನ ಎಲ್ಲಾ ನಾರುಗಳನ್ನು ಕೆರೆದು ಸ್ವಚ್ಛಗೊಳಿಸಿದ ಅರ್ಥ ಶರೀರದ ಮೇಲಿನ ಮೋಹ ಕಳೆಯುವಂತೆ ಸೂಚನೆ ನೀಡಿದ್ದು.
ನಂತರ ಎಲ್ಲರನ್ನು ಹೊರಗೆ ನೀರು ತುಂಬಿಸಲು, ಪಾತ್ರೆ ಬೆಳಗಲು ಕಳಿಸಿದರು. ನನಗೆ ಅಲ್ಲೇ ಕುಳಿತುಕೊಳ್ಳುವಂತೆ ಸನ್ನೆ ಮೂಲಕ ತಿಳಿಸಿದರು. ಬಳಿಕ ಕೊಬ್ಬರಿಯನ್ನು ತುರಿಯಲು ಆರಂಭಿಸಿದರು. ಸ್ವಲ್ಪ ಕೊಬ್ಬರಿಯನ್ನು ತೆಗೆದು ನನಗೆ ತಿನ್ನಿಸಿದರು, ಅಬ್ಬಾ ಬೆಣ್ಣೆಯಂತೆ ಮೃದುವಾಗಿ ಅಮೃತದಂತೆ ಸಿಹಿ ಸಿಹಿಯಾಗಿತ್ತು. ಬಳಿಕ ಒಬ್ಬೊಬ್ಬರನ್ನೇ ಒಳಗೆ ಕರೆದು ತಿನ್ನಿಸಿದರು. ಬಳಿಕ ದ್ರಾಕ್ಷಿ ಹಣ್ಣುಗಳನ್ನು ನೀರಿನಿಂದ ಎರಡು-ಮೂರು ಬಾರಿ ತೊಳೆದು ಎಲ್ಲರಿಗೆ ನೀಡಿದರು. ಕಾರ್ಯದ ಮಹತ್ವವನ್ನು ಅರಿವು ಮೂಡಿಸಿದರು. ಆಡಬೇಕಾದುದನ್ನು ಮಾಡಿ ತೋರಿಸಿದರು, ಮಾಡಿದ್ದನ್ನೇ ಹೇಳು ಹೇಳಿದುದನ್ನೇ ಮಾಡು ಎಂಬ ನಿತ್ಯಾನಂದರ ನುಡಿಯ ನೆನಪಾಯಿತು. ಸಾರು ಕುದಿಯುತ್ತಿತ್ತು ಅದನ್ನು ಸೌಟಿನಿಂದ ತಿರುಗಿಸಲು ಹೋದರೆ ರಾಜುವಿಗೆ ಬೈಯುತ್ತಿದ್ದರು, ಸುಮ್ಮನಿದ್ದರೆ ತಿರುಗಿಸಲು ಹೇಳುತ್ತಿದ್ದರು, ಸಿಟ್ಟಿನಿಂದ ಬಯ್ಯುತ್ತಿದ್ದರು, ತಲೆ ಮೇಲೆ ಹೊಡೆದು ನಗುತ್ತಿದ್ದರು. ಅವಧೂತನ ನಡೆ-ನುಡಿ ಅರ್ಥವಾಗದ್ದು. ಮೊದಲು ರಾಜು ನನಗೆ ನೂರಾರು ಪ್ರಶ್ನೆಗಳನ್ನು ಕೇಳುತ್ತಿದ್ದಾಗ ಗುರು ಸೇವೆಯಿಂದ ಎಲ್ಲಾ ಸಮಸ್ಯೆಗಳಿಗೆ ಉತ್ತರ ಹಾಗೂ ಸಾಧಕರಿಗೆ ಉತ್ತಮ ಮಾರ್ಗದರ್ಶನ ದೊರೆಯುತ್ತದೆ, ಎಂದಿದ್ದೆ. ಅವಧೂತರದ್ದು ಪುಸ್ತಕ ಜ್ಞಾನವಲ್ಲ ಮಸ್ತಕ ಜ್ಞಾನ, ಅದು ಜ್ಞಾನದ ಸಾಗರ. ಅವಧೂತರ ಸೇವೆ ಮಾಡುವ ಅವಕಾಶ ದೊರೆತದ್ದು ಪೂರ್ವಜನ್ಮದ ಸುಕೃತದಿಂದ ಎಂಬುದು ರಾಜುವಿಗೆ ಅರ್ಥವಾಗಿತ್ತು. ಯಾವುದನ್ನು ಅರ್ಥಮಾಡಲು, ವಿವರಿಸಲು, ವರ್ಣಿಸಲು ಅಸಾಧ್ಯವೋ ಅದೇ ಅವಧೂತಾವಸ್ತೆ.ಹಣ್ಣು ಕೊಟ್ಟು ಆಶೀರ್ವಾದ ಮಾಡಿದರು. ಅನ್ನ-ಸಾರಿನ ಪ್ರಸಾದ ನೀಡಿ ಹೊರಡುವಂತೆ ಸೂಚಿಸಿ, “ಹೋಗ್ತೀರಾ?” ಅಂತ ಕೇಳಿದರು. ಆಶೀರ್ವಾದ ಮಾಡಜ್ಜಾ ಅಂತ ಕೈಮುಗಿದು ಪ್ರಾರ್ಥಿಸಿದೆ. “ಮಾಡುವುದೇನೂ ಇಲ್ಲ, ಮಾಡುವುದಲ್ಲ , ಆಗುವುದು” ಎಂದರು. ಉಸಿರಾಟ ಮಾಡುವುದು ಅಲ್ಲ ತಾನೇ ನಡೆಯುತ್ತೆ ಅದನ್ನು ಮನಸ್ಸು ಮತ್ತು ಪ್ರಾಣವನ್ನು ನಿರೋಧಿಸಬೇಕು. “ಆಗುತ್ತೆ ಆಗುತ್ತೆ ಎಲ್ಲಾ ಆಗಿದೆ” ಎಂದರು.
ರಾತ್ರಿ ಎರಡು ಗಂಟೆಗೆ ಬೇವಿನಕೊಪ್ಪ ಆಶ್ರಮ ತಲುಪಿದೆವು. ನಾನು ರಾಜುವಿಗೆ ಮುಂಜಾನೆ ತಲುಪಿದೆವು ಎಂದು ಹೇಳಲಿಕ್ಕೆ ಫೋನ್ ಮಾಡಿದೆ, 8ಗಂಟೆಗೆ ಉತ್ತರ ಬಂತು. “ಆರಾಮಾಗಿ ಅವರು ತಲುಪಿದ್ರಾ?” ಅಂತ ಸಿದ್ಧಪ್ಪಾಜಿ ಕೇಳಿದರು ಎಂದು ರಾಜು ಹೇಳಿದ. ಬಳಿಕ ಅಪ್ಪಾಜಿ ಮಾತನಾಡುತ್ತಾರೆ ಎಂದು ರಾಜು ಹೇಳಿದಾಗ, “ಆರಾಮಾಗಿ ತಲುಪಿದ್ರಾ?” ಸಿದ್ಧಪ್ಪಾಜಿ ಕೇಳಿದರು, “ಎಲ್ಲಾ ಆರಾಮಾಗಿ ನಡೆಯುತ್ತೆ”.ಶರಣು ತಾತ ಶರಣು ಶರಣಾರ್ಥಿ ಎಂದೆ, “ಶರಣು ಶರಣು ಶರಣು ಶರಣು” ಎಂದರು, ಫೋನ್ ಮೌನವಾಯಿತು. ನಿಶಬ್ದ, ನಿಶ್ಶಬ್ದವೇ ಬ್ರಹ್ಮ! ಮಾಡುವುದಲ್ಲ, ಯಾವುದನ್ನು ಮಾಡಿದೆವೆಂದು ತಿಳಿಯುತ್ತಿದ್ದೇವೆಯೋ ಅದು ‘ಅಹಂ’, ಮಾಡುವುದಲ್ಲ ಆಗುವುದು, ಬರುವುದು ಹೋಗುವುದು ಅಲ್ಲ, ಇರುವುದು. ಯಾವುದು ಹೌದು ಅದು ಅಲ್ಲ, ಯಾವುದು ಅಲ್ಲಾ ಅದು ಹೌದು. ಆತನಿಗೆ ಮಡಿಮೈಲಿಗೆ ಇಲ್ಲ. ಆದರೆ ಅವಧೂತ ಸಿದ್ಧಪ್ಪಾಜಿ ಯಾಕೆ ಹಣ್ಣು, ನೆಲ, ಪಾತ್ರೆ, ಆಶ್ರಮ ಸ್ವಚ್ಛ ಮಾಡುತ್ತಾರೆ ಎಂಬ ಪ್ರಶ್ನೆ ಕಾಡಬಹುದು. ಮನದ ಮೈಲಿಗೆಯನ್ನು ಮಡಿ ಮಾಡು, ನಿರ್ಮಲ ಮನ ಹಾಗೂನಿಶ್ಚಲ ಮನೋಭಾವನೆ ಅತೀ ಅವಶ್ಯ ಎಂಬುದನ್ನು, ಕಾಯಕವೇ ಕೈಲಾಸ, ಕಾಯಕದ ಮೌಲ್ಯವನ್ನು ತಾನೇ ಮಾಡಿ ಇತರರೂ ಮಾಡುವಂತೆ ಪ್ರೋತ್ಸಾಹಿಸುತ್ತಿದ್ದರು ಎಂದು ನಾವು ತಿಳಿಯಬೇಕು.
ಸಾರು, ಪಲ್ಯ, ಅನ್ನ, ಕಷಾಯ ಎಲ್ಲವನ್ನೂ ಅವರ ದಿವ್ಯ ಹಸ್ತಸ್ಪರ್ಶದಿಂದ ಮಾಡಿ, ಭಕ್ತರಿಗೆ ತಾವೇ ಉಣಬಡಿಸಿ, ತಟ್ಟೆಗಳನ್ನು ತಾವೇ ಸ್ವಚ್ಛ ಮಾಡುತ್ತಿದ್ದರು. ಇದರ ಮೂಲಕ ಪ್ರಲಯ ಕಾಲದಲ್ಲಿ ನೀರಿನಿಂದ ಆವರಿಸಿ ಎಲ್ಲವನ್ನು ಪ್ರಕೃತಿ ಸ್ವಚ್ಛಮಾಡುತ್ತದೆ ಎಂದು ತೋರಿಸುತ್ತಿದ್ದರು. ಪ್ರತಿಯೊಂದು ಕಟ್ಟಡದ ತಾರಸಿ ಮೇಲೆ ಹುಲ್ಲು, ಕಾಯಿಪಲ್ಯ ಇತ್ಯಾದಿಗಳನ್ನು ಸಿದ್ಧಪ್ಪಾಜಿ ಬೆಳೆಸಿದ್ದಾರೆ, ಮುಂದಿನ ದಿನಗಳಲ್ಲಿ ಅಂತಹದೇ ಪರಿಸ್ಥಿತಿ ಬರುತ್ತೆ, ಬೆಲೆ ಏರಿಕೆಯಿಂದ ತಾವೇ ಮನೆಯ ಮೇಲೆ ತರಕಾರಿ ಹುಲ್ಲು ಬೆಳೆಸಿ ಉಣ್ಣುವ ಪರಿಸ್ಥಿತಿ ಬರುತ್ತದೆ ಎಂದು ತೋರಿಸಿಕೊಡುತ್ತಿದ್ದಾರೆ ಅಂತ ರಾಜು ಹೇಳಿದಾಗ ಆಶ್ಚರ್ಯವಾಯಿತು.
- ನಮೋ ನಿತ್ಯಾನಂದಾಯ
- ಸ್ವಾಮೀ ವಿಜಯಾನಂದ
- ನಿತ್ಯಾನಂದ ಧ್ಯಾನ ಮಂದಿರ, ಬೇವಿನಕೊಪ್ಪ