ಅಧ್ಯಾಯ 13: ಹುಲಿಯೊಡನೆ ಸಂಭಾಷಣೆ!

ಒಂದು ದಿನ ಭಕ್ತವೃಂದದವರ ಜೊತೆ ಗುರುಗಳು ನದೀತಟದ ಕಡೆಗೆ ಹೊರಟರು. ಅಲ್ಲಿ ಊಟದ ಏಲೆಗಳ (ಪತ್ರಾವಳಿ) ದೊಡ್ಡ ಮರವಿತ್ತು. ತದೇಕ ಚಿತ್ತದಿಂದ ಗುರುಗಳು ಅದನ್ನು ವಿಕ್ಷೀಸತೊಡಗಿದರು.

“ಚಿದಾನಂದಾ, ನೋಡು ಈ ಮರ ಎಷ್ಟು ದೊಡ್ಡದಿದೆ” ಎಂದರು.”ನೀನು ಈ ಮರದ ಕೊನೆಯ ಕೊಂಬೆಯವರೆಗೆ ಏರಬಲ್ಲೆಯ್ಯಾ?”ಚಿದಾನಂದ, “ಹ್ಹೂ” ಎನ್ನುತ್ತಾ ಮರದ ತುತ್ತ ತುದಿಗೆ ಏರಿ ತಲುಪಿದನು. “ಹ್ಹೂ, ಈ ಒಂದು ಕೊಂಬೆಯನ್ನು ಹಿಡಿದು ನೇತಾಡು- ಜೋಕಾಲಿ ಆಡು” ಎಂದು ಗುರು ಅಪ್ಪಣೆಯಾಯಿತು.ಹಾಗೆಯೇ ಮಾಡಿದನು. ಚಿದಾನಂದ ಜೋಕಾಲಿ ಆಡ ತೊಡಗಿದನು.ಹ್ಹೂ, ಈಗ ಒಂದು ಕೈ ಕೆಳಗೆ ಹಾಕಿ ಒಂದೇ ಕೈಯಿಂದ ಜೋಕಾಲಿ ಆಡು.ಚಿದಾನಂದನು ಹಾಗೇಯೇ ಮಾಡಿದನು.ಈ ದೃಶ್ಯ ಕಂಡು ಉಳಿದ ಶಿಷ್ಯರು ಗಾಬರಿಗೊಂಡರು. ಮುಗಿಲೆತ್ತರದ ಮರ ಕೆಳಗೆ ದೊಡ್ಡ ದೊಡ್ಡ ಬಂಡೆಗಳು. ಕೈ ತಪ್ಪಿದರೆ ಕೈಲಾಸ.

ಚಿದಾನಂದಾ ಎರಡು ಕೈ ಬಿಟ್ಟುಬಿಡು ಎಂದರು.”ಜೈ ಗುರುದೇವ ಸಮರ್ಥಾ” ಎಂದು ಚಿದಾನಂದನು ಕೈ ಬಿಟ್ಟು ರಭಸವಾಗಿ ಬಂಡೆಗಳ ಮೇಲೆ ಬಿದ್ದೇಬಿಟ್ಟನು.ಚಿದಾನಂದನ ಕಥೆ ಮುಗಿಯಿತು ಎಂದು ಎಲ್ಲ ನೆರೆದ ಜನ ಗಾಬರಿಯಾದರು. ದೊಡ್ಡ ಪವಾಡವೇ ನಡೆಯಿತು. ಯಾವುದೇ ಏಟು ತಗಲದೇ ಚಿದಾನಂದನು ನಗುನಗುತ್ತಾ ನಡೆಯುತ್ತಾ ಬಂದೆ ಬಿಟ್ಟನು.ಗುರು ಶಿಷ್ಯರ ಈ ಲೀಲೆ ಕಂಡು ಶಿಷ್ಯರಿಗೆ ಭಕ್ತರಿಗೆ ಭಕ್ತಿ ಮೂಡಿತು. “ವಿಶ್ವಾಸೊ ಫಲದಾಯಕ”.ಮರುದಿನ ಗುರುಗಳು ಚಿದಾನಂದನನ್ನು ಪಕ್ಕದ ಆನೆಗುಂದಿಗೆ ಕರೆದುಕೊಂಡು ಹೋದರು. ದಾರಿಯ ಅರಣ್ಯ ಪ್ರದೇಶದಲ್ಲಿ ದೊಡ್ಡ ಹೆಬ್ಬುಲಿ ಘರ್ಜಿಸುತ್ತಾ ಎದುರು ಬಂತು.ಗುರುಗಳು ಧ್ಯಾನಕ್ಕೆ ಕುಳಿತಿದ್ದರು. ಹುಲಿಗೆ ಘರ್ಜಿಸಬೇಡಾ ಎಂದು ಹೇಳು ಧ್ಯಾನಕ್ಕೆ ತೊಂದರೆಯಾಗುತ್ತದೆ.

ಗುರುಗಳು ಆಜ್ಞೆ ಮಾಡಿದರು, ಚಿದಾನಂದನು ನೇರವಾಗಿ ಹುಲಿಯ ಬಳಿ ಹೋಗಿ ಅದರ ಹಣೆ ಸ್ಪರ್ಶ ಮಾಡಿದನು. “ಹೋಗು ದೂರ ಹೋಗಿ ಮಲಗಿ ಬಿಡು” ಎಂದನು. ಹುಲಿ ಸಾಕಿದ ಬೆಕ್ಕಿನಂತೆ ದೂರ ಹೋಗಿ ಮಲಗಿಯೇ ಬಿಟ್ಟಿತು. ಕೊನೆಗೆ ಗುರುಗಳ ನಾಥನೆಂಬ ಶಿಷ್ಯನ ಮನೆಯಲ್ಲಿ ಊಟ ಮಾಡಿ ವಿಶ್ರಾಂತಿ ಪಡೆದರು. ಚಿದಾನಂದ ಈ ಬೆಟ್ಟದ ಮೇಲೆ ರಂಗನಾಥ ಸ್ವಾಮಿಯ ಗುಡಿಯಿದೆ. ಗುಡಿಯ ಹಿಂದಿನ ಒಂದು ಗುಹೆಯೊಳಗೆ ನಾನು ಹೋಗಿದ್ದೆ. ಅಲ್ಲಿ ನೋಡು ಹೋಗು ಅದು ಅತ್ಯಂತ ದುರ್ಗಮವಾದ ಸ್ಥಳ ಅಲ್ಲಿ ಸಾಮಾನ್ಯರು ಹೋಗಲು ಸಾಧ್ಯವಿಲ್ಲಾ. ಅಲ್ಲಿ ನಾನು ಸಾಧನೆ ಮಾಡುವಾಗ ಗುಂಡಿಗೆ ತಪ್ಪಲಿನ ರಸದಲ್ಲಿ ಕಲ್ಲಿನ ಮೇಲೆ ಏನೋ ಬರೆದಿದ್ದೇನೆ. ಬರೆದ ವಿಷಯವನ್ನು ತಿಳಿದುಕೊಂಡು ಬಾ ಎಂದರು.ಚಿದಾನಂದ ಹೊರಟನು. ನಿನಗೆ ಮಂಗಳವಾಗಲಿ ಹೋಗಿ ಬಾ ಎಂದರು.ರಾತ್ರಿಯ ವೇಳೆ ಅಮವಾಸ್ಯೆಯ ಹಿಂದಿನ ರಾತ್ರೆ ಘಾಡವಾದ ಮೋಡ, ಕತ್ತಲು ಕವಿದಿತ್ತು.

ಅಲ್ಲಲ್ಲಿ ಮಳೆಯಿಂದ ನಿರ್ಮಾಣವಾದ ಹೊಂಡಗಳು ವಿಷಪೂರಿತ ಚೇಳು, ಹಾವುಗಳು ನಿಧಾನವಾಗಿ ದಾಟುವಾಗ ಹೆಬ್ಬಾವು ಕತ್ತಿಗೆ ಜೋತು ಬಿದ್ದಿತು. ಅದನ್ನು ಕೈಯಿಂದ ತೆಗೆದು ದೂರ ಎಸೆದನು. ಏಳುತ್ತಾ ಬಿಳುತ್ತಾ ಬಂಡೆಯ ಮೇಲೆ ಜಾರುತ್ತಾ. ಒಂದು ವಿಚಿತ್ರ ಸ್ಥಳ ತಲುಪಿದನು. ಅಲ್ಲಿ ಒಂದು ಬಿಲ ಇತ್ತು. ಹಿಂದೆ ಬರುವಂತಿಲ್ಲಾ ಮುಂದೆ ಹೋಗುವಂತಿಲ್ಲಾ. ಪ್ರಾಣದ ಆಸೆ ತೊರೆದು ಬಿಲದ ಒಳಗಡೆ ಹೋಗಿ ಬಿಟ್ಟನು. ಅದೊಂದು ರಮ್ಯ ರಮಣೀಯ ಸ್ಥಾನವಾಗಿತ್ತು. ಅದು ಗುರುಗಳ ಗುರು ಶಿವಾನಂದ ರಾಜಯೋಗಿಗಳಿಗೆ ಆತ್ಮ ಸಾಕ್ಷಾತ್ಕಾರವಾದ ಸ್ಥಾನವಾಗಿತ್ತು. ಎಡಬಲಗಳಲ್ಲಿ ಮಾಣಿಕ್ಯದಂತಹ ಕೆಂಪು ವರ್ಣದ ಕಲ್ಲುಗಳು ಬುಡದಲ್ಲಿ ಹಸಿರು ವರ್ಣದ ಕಲ್ಲುಗಳು, ಸುಗಂಧ ಬೀರುವ ಪುಷ್ಪಗಳು, (ತ್ರಿಪುರಾ ರಹಸ್ಯದಲ್ಲಿ ಈ ಸ್ಥಾನದ ವರ್ಣನೆ ಇದೆ) ಅಲ್ಲಿ ಸ್ವಲ್ಪ ಮುಂದೆ ಫಳ ಪಳನೇ ಹೊಳೆಯುವ ಗುಂಡು ಕಲ್ಲು ಕಾಣಿಸಿತು. ಅದರ ಮೇಲೆ ತಪ್ಪಲಿನ ಸಹಾಯದಿಂದ ಬರೆದ ದಪ್ಪ ಅಕ್ಷರಗಳು ಗೋಚರಿಸಿದವು. ಹತ್ತಿರ ಹೋದಾಗ ಮೈಯಲ್ಲಿ ವಿದ್ಯುತ್ತ್ ಸಂಚಾರವಾದಂತಾಯಿತು. ಅದರ ಮೇಲೆ “ಶ್ರೀ ವರ ಮೂರ್ತಿ ವಿರೂಪಾಕ್ಷ” ಎಂದು ಬರೆಯಲಾಗಿತ್ತು.

(ಮುಂದುವರಿಯುವುದು)

ಸಂಗ್ರಹ ಸ್ವಾಮಿ ವಿಜಯಾನಂದರು

ಮೂಲ ಕೃತಿ S.V. ಪಾಟೀಲ ಗುಂಡೂರ ಅವರ “ರಾಜಯೋಗಿ ಶ್ರೀ ಚಿದಾನಂದ ಅವಧೂತರು”

. ಸಂಕಲನ:ಸಿದ್ಧಾರೂಢ ಹಿರೇಮಠ, ನಿತ್ಯಾನಂದ ಧ್ಯಾನ ಮಂದಿರ, ಬೇವಿನಕೊಪ್ಪ.

Share it with the world ~