ಒಂದು ದಿನ ಆಶ್ರಮದಲ್ಲಿ ದೊಡ್ಡ ಕಾರ್ಯಕ್ರಮ ಹಮ್ಮಿ ಕೊಂಡಾಗ, ಅಡುಗೆಗೆ ತುಪ್ಪ ಕಡಿಮೆಯಾಗಿತ್ತು. ಪಕ್ಕದ ಕಂಪ್ಲಿ ಊರಿಗೆ ಹೋಗಿ ತುಪ್ಪ ತರುವಂತೆ ಗುರುಗಳು ಚಿದಾನಂದನಿಗೆ ಹೇಳಿದರು.
ತಕ್ಷಣ ಚಿದಾನಂದ ಮಣ್ಣಿನ ಬಿಂದಿಗೆಯೊಂದಿಗೆ ಹೊರಡಲು ಕಾರ್ಗತ್ತಲು ದಾರಿಯಲ್ಲಿ ಧಾರಾಕಾರ ಮಳೆ ಸುರಿಯ ತೊಡಗಿತು. ಕಂಪ್ಲಿಗೆ ನದಿದಾಟಿ ಹೋಗ ಬೇಕಾಗಿತ್ತು. ನದಿ ತುಂಬಿ ಹರಿಯುತ್ತಿತ್ತು. ಅಂಬಿಗರು ಹೊಳೆದಾಟಿಸಲು ದೋಣಿಯಿಂದ ನದಿದಾಟಲು ಸಾದ್ಯವಿಲ್ಲಾ ಎಂದರು. ಮೊಣಕಾಲಿನವರೆಗೆ ನೀರಿನಲ್ಲಿ ಹರಿಯುವ ನದಿಯ ರಭಸವನ್ನು ಲೆಕ್ಕಿಸದೆ ಚಿದಾನಂದ ಸಾಗುತ್ತಾ ಹೋದಾಗ ಅಂಬಿಗರು ದಾವಿಸಿ ಬಂದು ಮುಂದೆ ಹೋಗಬೇಡಿ ಎನ್ನುತ್ತಿದಂತೆ. ತುಂಬಿ ಹರಿಯುವ ನದಿಯ ಮೇಲೆ ಚಿದಾನಂದ ನಿಂತೇ ಬಿಟ್ಟನು ಬಳಿಕ ತಲೆಯಲ್ಲಿ ಖಾಲಿ ಬಿಂದಿಗೆ ಹೊರುತ್ತಾ ನದಿಯ ಮೇಲೆ ನಡೆಯುತ್ತಾ ಹೊಳೆ ದಾಟಿದನು.
ನದಿಯ ಆಚೆ ದಡದಲ್ಲಿ ತುಂಬಿ ಬಂದುದಕ್ಕಾಗಿ ಗಂಗಾ ಪೂಜೆಗಾಗಿ ಕುಂಭ ಹಿಡಿದು ನೂರಾರು ಮಂದಿ ಸೇರಿದ್ದರು. ಅವರೆಲ್ಲಾ ಆಶ್ಚರ್ಯದಿಂದ ಬಿಂದಿಗೆ ಹೊತ್ತು ನದಿಯ ಮೇಲೆ ನಡೆದು ಬರುತ್ತಿರುವ ಮನುಷ್ಯ ಆಕಾರವನ್ನು ಕಂಡರು. ಸನಿಹ ಬಂದಾಗ ಗುರುತು ಹಿಡಿದರು ಅರೆ ಇವನು ಅಯೋದ್ಯಯ ಅವಧೂತ ಗುರು ಕೊಂಡಪ್ಪಜ್ಜನ ಶಿಷ್ಯ ಚಿದಾನಂದ ಎಂದು ತಿಳಿದರು.
ಆತ ನಡೆಯುತ್ತಾ ತುಪ್ಪದ ಅಂಗಡಿಯ ತಿಮ್ಮಣ್ಣನ ಬಳಿ ಹೋಗಿ ತುಪ್ಪ ಖರೀದಿ ಮಾಡಿದನು. ಜನರು ಪಂಜು ಹಿಡಿದು ಜಯಕಾರ ಘೋಷಣೆ ಮಾಡುತ್ತಿದ್ದರು. ತುಪ್ಪದ ಅಂಗಡಿಯ ತಿಮ್ಮಣ್ಣ ಚಿದಾನಂದರ ಲೀಲೆ ಕಂಡು ಉಚಿತವಾಗಿ ಜಾತ್ರೆಗೆ ತುಪ್ಪ ಹಾಗೂ ಇತರ ಸಾಮಗ್ರಿಗಳನ್ನು ಉಚಿತವಾಗಿ ನೀಡಿದನು.ಅಯೋದ್ಯ ಹಾಗೂ ಪಕ್ಕದ ಗ್ರಾಮ ಹಳ್ಳಿಗಳಲ್ಲಿ ಚಿದಾನಂದನ ಲೀಲೆಯ ಕುರಿತು ಅಗಾಧ ಮಹಿಯ ವರ್ಣನೆ ನಡೆಯಿತು. ಗುರುಗಳು ಚಿದಾನಂದನನ್ನು ತಬ್ಬಿಕೊಂಡರು, ಚಿದಾನಂದನು ಗುರುಗಳಿಗೆ ಕರ ಜೋಡಿಸಿ, ಗುರುಗಳು ಅನ್ನಥಾ ಭಾವಿಸ ಬಾರದು, ದಯವಿಟ್ಟು ಕ್ಷಮಿಸಬೇಕು. ನೀರಿನ ಮೇಲೆ ನಡೆದವನು ನಾನಲ್ಲ ನಾನು ನಿಮಿತ್ಯ ಮಾತ್ರ ನಡೆಸಿದವರು ನೀವು ಗುರುಗಳು. ಎಲ್ಲಾ ಗುರು ಮಹಿಮೆ, ಗುರುಕೃಪೆ, ಎಲ್ಲದಕ್ಕೂ ಪ್ರೇರಕ, ಪೂರಕ ಗುರುನಾಥ, ಗುರು ಮಹಿಮೆ.
(ಮುಂದುವರಿಯುವುದು)
ಸಂಗ್ರಹ ಸ್ವಾಮಿ ವಿಜಯಾನಂದರು,
ಮೂಲ ಕೃತಿ S.V. ಪಾಟೀಲ ಗುಂಡೂರ ಅವರ “ರಾಜಯೋಗಿ ಶ್ರೀ ಚಿದಾನಂದ ಅವಧೂತರು”.
ಸಂಕಲನ:ಸಿದ್ಧಾರೂಢ ಹಿರೇಮಠ, ನಿತ್ಯಾನಂದ ಧ್ಯಾನ ಮಂದಿರ, ಬೇವಿನಕೊಪ್ಪ.