ಅಧ್ಯಾಯ 11: ಧರ್ಮ

ಚಿದಾನಂದನು ಅದ್ಭುತವಾಗಿ ಪ್ರವಚನ ಮಾಡ ತೊಡಗಿದನು. ಒಂದು ದಿನ ಚಿದಾನಂದನು ಪ್ರವಚನ ಮಾಡುತ್ತಿದ್ದ ಪಂಪಾ ವಿರೂಪಾಕ್ಷ ಗುಡಿಗೆ ಪ್ರವಚನ ಕೇಳಲು. ತಾನೂ ಬರುತ್ತೇನೆ ಎಂದು ಗುರುಗಳು ಹೇಳಿದರು.ಪೂಜ್ಯ ಗುರುಗಳ ಸಾನಿಧ್ಯದಲ್ಲಿ ಚಿದಾನಂದನು 84 ಲಕ್ಷ ಜೀವರಾಶಿಗಳಲ್ಲಿ ಮಾನವನಿಗೆ ಮಾತ್ರ ಮಹಾತ್ಮನಾಗುವ ಅವಕಾಶವಿದೆ. ಅದಕ್ಕಾಗಿ ಮಾನವ ಧರ್ಮವೇ ಶ್ರೇಷ್ಟವಾಗಿದೆ ಎಂದು ಯಾರು ನುಡಿದು ಅದರಂತೆ ನಡೆಯುತ್ತಾರೋ ಅವರೇ ಮಹಾತ್ಮರು.ಮಾನವ ಜನ್ಮ ಪಾಲಿಸಬೇಕು ಎಂದು ಚಿದಾನಂದನು ಪ್ರವಚನ ಮಾಡ ತೊಡಗಿದನು. ಧರ್ಮದ ಕುರಿತು ಒಂದು ಕತೆ ಹೇಳಿದನು.

ಒಂದು ದಿನ ಒಬ್ಬ ಮಹಾತ್ಮರು ಸ್ನಾನಕ್ಕೆಂದು ನದಿಯ ನೀರಿನಲ್ಲಿ ಇಳಿದಿದ್ದರು. ಅಲ್ಲಿ ಒಂದು ಚೇಳು ನೀರಿನಲ್ಲಿ ಬಿದ್ದು ಪ್ರಾಣ ಸಂಕಟದಿಂದ ಒದ್ದಾಡುತ್ತಿತ್ತು. ಮಹಾತ್ಮರು ಅದನ್ನು ಬೆರಳಿನಿಂದ ಹಿಡಿದೆತ್ತಿ ದಂಡೆಗೆ ಹಾಕಿದರು. ಆಗ ಚೇಳು ಅವರ ಬೆರಳಿಗೆ ಕಚ್ಚಿತ್ತು. ಬಳಿಕ ಜಾರಿ ನೀರಿಗೆ ಬಿತ್ತು. ಮತ್ತೊಮ್ಮೆ ಮಹಾತ್ಮರು ಅದನ್ನು ಹಿಡಿದು ದಂಡೆಗೆ ಹಾಕಿದರು. ಆಗಲೂ ಅದು ಕಡಿಯಿತು. ಅಷ್ಟರಲ್ಲಿ ಅದನ್ನು ಕಂಡ ಶಿಷ್ಯರು ಅಯ್ಯೋ ಗುರುಗಳೇ ಆ ಚೇಳು ವಿಷ ಜಂತು. ಅದನ್ನು ರಕ್ಷಿಸಲು ಹೋಗಿ ಎರಡು ಬಾರಿ ಕಡಿಸಿ ಕೊಂಡಿರಿ ಎಂದು ನಕ್ಕನು.ತಕ್ಷಣ ಮಹಾತ್ಮರು ಹೇಳಿದರು, “ಶಿಷ್ಯಾ ಚೇಳಿಗೆ ಯೋಚಿಸುವ ಶಕ್ತಿಯಿಲ್ಲಾ, ನಾನದನ್ನು ಕಾಪಾಡುತ್ತಿದ್ದೇನೆನೆಂಬ ತಿಳುವಳಿಕೆ ಇಲ್ಲಾ. ಅದು ತನ್ನ ದೇಹದ ಯಾವುದೇ ಭಾಗಕ್ಕೆ ಸ್ಪರ್ಶ ಮಾಡಿದರೂ ಕಚ್ಚಿ ಬಿಡುತ್ತದೆ. ಆತ್ಮ ರಕ್ಷಣೆಗಾಗಿ ಹಾಗೆ ಮಾಡುತ್ತದೆ. ಕಚ್ಚುವುದು ಚೇಳಿನ ಧರ್ಮ. ರಕ್ಷಿಸುವುದಷ್ಟೇ ಮಹಾತ್ಮರ ಧರ್ಮ ಅದರ ಧರ್ಮ ಅದು ಪಾಲಿಸಿದೆ. ನನ್ನ ಧರ್ಮ ನಾನು ಪಾಲಿಸಿದ್ದೇನೆ. ದಯೆಯೇ ಧರ್ಮದ ಮೂಲವಯ್ಯಾ ಎಂದರು.

ಪ್ರವಚನಕ್ಕೆ ಮೆಚ್ಚಿ ಗುರುಗಳು ಚಿದಾನಂದನ ಜೊತೆ ಹೊರಟಾಗ, ಬಂಡೆಯ ಬಳಿ ದೊಡ್ಡ ವಿಷ ಸರ್ಪ ಎದುರಾಯಿತು ಜನ ಸೇರಿದರು.ಗುರುಗಳು ಚಿದಾನಂದನ ಕಡೆ ನೋಡಿ “ಚಿದಾನಂದಾ” ಎಂದರು. ಚಿದಾನಂದನು ಕ್ಷಣ ಮಾತ್ರದಲ್ಲಿ ಸರ್ಪವನ್ನು ಹಿಡಿದೇ ಬಿಟ್ಟನು. ಅದು ಬುಸುಗುಟ್ಟುತ್ತಿತ್ತು. ಈಗ ಏನು ಮಾಡಬೇಕು? ಗುರುಗಳು ಕೇಳಿದರು.ಗುರುಗಳೇ ಗುರು ವಾಕ್ಯ ಪಾಲಿಸುವುದು ನನ್ನ ಧರ್ಮ. ನಿಮ್ಮ ಆಜ್ಞೆಯಂತೇ ಹಿಡಿದು ಕೊಂಡಿದ್ದೇನೆ.ಮುಂದಿನ ಸ್ಥಿತಿಗತಿಯ ನಿಮಗೆ ತಿಳಿದೇ ಇದೆ. “ತಮ್ಮ ಛಾಯೆ, ತಮ್ಮ ವಾಣಿ ಆ ಘಟ ಸರ್ಪದ ಮೇಲೆ ಬಿದ್ದಿದೆ. ಅದರ ಭಾವನೆ ಕಂಡಿತ ಪರಿವರ್ತನೆಯಾಗುತ್ತದೆ”. ಎಂದನು.ಗುರುಗಳು, “ಬಿಟ್ಟು ಬಿಡು ಅದನ್ನು” ಎಂದರು.ತಕ್ಷಣ ಸರ್ಪ ಹೆಡೆ ಎತ್ತಿ ಗುರು ಶಿಷ್ಯರಿಗೆ ವಂದಿಸಿ ನದಿಯ ಕಡೆ ಹೊರಟು ಹೋಯಿತು.ಚಿದಾನಂದಾ, ಸಾತ್ವಿಕ ವ್ಯಕ್ತಿಗಳ ತಪಸ್ಸಿನ ಫಲದಿಂದ ಎಂಥಹ ವಿಷ ಜಂತುವೇ ಆಗಿರಲಿ ಮಹಾತ್ಮರ ವಾಣಿ, ನೆರಳು ಬಿದ್ದರೂ ಸಾಕು. ಅದರ ಮೂಲ ಭಾವ ಮರೆಯಾಗಿ ಸಾತ್ವಿಕವಾಗಿ ಪರಿವರ್ತನೆಯಾಗಿ ಆಜ್ಞೆಯನ್ನು ಪಾಲಿಸುತ್ತದೆ. ಎಂದರು.ಗುರು ಶಿಷ್ಯರ ಈ ಲೀಲೆ ಕಂಡು- ಭಕ್ತಾಭಿಮಾನಿಗಳು ಜಯಕಾರ ಹಾಕಿದರು.

(ಮುಂದುವರಿಯುವುದು)

ಸಂಗ್ರಹ ಸ್ವಾಮಿ ವಿಜಯಾನಂದರ.

ಮೂಲ ಕೃತಿ S.V. ಪಾಟೀಲ ಗುಂಡೂರ ಅವರ “ರಾಜಯೋಗಿ ಶ್ರೀ ಚಿದಾನಂದ ಅವಧೂತರು”.

ಸಂಕಲನ:ಸಿದ್ಧಾರೂಢ ಹಿರೇಮಠ, ನಿತ್ಯಾನಂದ ಧ್ಯಾನ ಮಂದಿರ, ಬೇವಿನಕೊಪ್ಪ.

Share it with the world ~