ಅಧ್ಯಾಯ 10: ಯೌಗಿಕ ಶಕ್ತಿ ಆತ್ಮ ಪ್ರಕಾಶಕ್ಕೆ!

ಯಾವುದೋ ಆಶ್ರಮದ ಕೆಲಸಕ್ಕೆ ಹಣ ಬೇಕಾಗಿತ್ತು. ಅದನ್ನು ಕೊಂಡಪ್ಪ ಗುರುಗಳು ಪುಟ್ಟಪ್ಪ ಎಂಬ ವರ್ತಕನಿಂದ ಸಾಲ ರೂಪದಲ್ಲಿ ಪಡೆದಿದ್ದರು. ಅಸಲು ಬಡ್ಡಿ ಎಲ್ಲಾ ಸೇರಿ ಹಣ ತೀರಿಸಲು ಕಷ್ಟವಾಯಿತು.ಪುಟ್ಟಪ್ಪ ಬಂದು ಗುರುಗಳಿಗೆ ಬಯ್ಯಲಾರಂಭಿಸಿ ತುಂಬು ಗರ್ಭಿಣಿ ಮಡದಿಯನ್ನು ಕರೆತಂದು ಆಶ್ರಮದಲ್ಲಿ ಟಿಕಾಣಿ ಹೂಡಿ ಗುರುಗಳಿಗೆ ದಿನಾ ಬಯ್ಯಲಾರಂಬಿಸಿದನು.ಇದೇ ವೇಳೆ ಕನಕ ಗಿರಿಯ ಪಾಳೆಯಗಾರ ಬಂದು ಅಯೋದ್ಯಗೆ ವಿನಾಕಾರಣ ಮುತ್ತಿಗೆ ಹಾಕಿ ಯುದ್ದ ಮಾಡುತ್ತಾನೆ.ತಕ್ಷಣ ಜ್ಞಾನಿಯಾದ ಚಿದಾನಂದ ಆನೆಗುಂದಿಗೆ ಹೋಗಿ ವಿಷಯವನ್ನು ಅಲ್ಲಿನ ವೀರ ಅಣ್ಣಪ್ಪನಾಯಕನನ್ನು ಭೇಟಿಯಾಗಿ ಸಹಾಯ ಕೇಳಿದಾಗ. ಅವನ ಸೈನ್ಯ ಬಂದು ಕನಕಗಿರಿ ಪಾಳೆಗಾರರನ್ನು ಓಡಿಸಿ ಗುರುಗಳ ಸಾಲವನ್ನು ತೀರಿಸುತ್ತಾನೆ.

ಚಿದಾನಂದನ ದೂರ ದೃಷ್ಟಿಯನ್ನು ಊರ ಭಕ್ತರು ಹಾಗೂ ಗುರು ಕೊಂಡಪ್ಪನವರು ಮೆಚ್ಚಿ ಕೊಂಡಾಡುತ್ತಾರೆ. ಕೊನೆಗೆ ಮಹಾ ತಪಸ್ಸಿ ಅವಧೂತ ಸ್ಥಿತಿಯ ಕೊಂಡಪ್ಪಜ್ಜನವರ ಬಗ್ಗೆ ಅಪಾರ ಭಕ್ತಿ ಗೌರವವಿರುವ. ಶೂರ ಅಣ್ಣಪ್ಪ ನಾಯಕ್ ಚಿದಾನಂದರನ್ನು ಕೇಳುತ್ತಾನೆ. ಇಂತಹ ಯೋಗ ಸಿದ್ದಿ ಪಡೆದ ಮಹಾನ್ ಸಿದ್ದ ಪುರುಷ ತನ್ನ ಇಚ್ಛೆ ಮಾತ್ರದಿಂದ ಲೌಕಿಕ ಜಂಜಡಗಳನ್ನು ದೂರ ಮಾಡಬಲ್ಲ ಅವದೂತ ಗುರುಗಳು ಕೊಂಡಪ್ಪಜ್ಜ ಸಾಲಗಾರ ಪುಟ್ಟಣ್ಣ ಬೈದಾಗಲು ಸುಮ್ಮನಿರುತ್ತಾರೆ. ಕನಕಗಿರಿಯ ಪಾಳೆಯಗಾರ ಆಕ್ರಮಣ ಮಾಡಿದಾಗಲು ಸುಮ್ಮನೆ ಮೌನದಿಂದಿದ್ದರು. ಊರಿಗೇ ಊರೇ ವೈರಿಗೆ ಆಹುತಿಯಾಗುವಾಗಲೂ ಸುಮ್ಮನೆ ಸಾಕ್ಷಿ ಭೂತರಾಗಿ ನೋಡುತ್ತಾ ಕುಳಿತುದೇಕೆ?ಅದಕ್ಕೆ ಚಿದಾನಂದ ಉತ್ತರಿಸುತ್ತಾನೆ, ಅವರಿಗೆ ಅಸಾಧ್ಯವದುದು ಯಾವುದೂ ಇಲ್ಲಾ. ಆಧ್ಯಾತ್ಮವಾದಿಗಳಾದ ಅವಧೂತರು ದೇಹಾಭಿಮಾನಿಗಳಲ್ಲಾ. ಶಿವನೇ ತಾನಾಗಿದ್ದರೂ ಕ್ಷುಲ್ಲಕವಾದ ಪ್ರಾಪಂಚಿಕ ವಿಷಯಗಳಿಗೆ ಪರಮ ಪವಿತ್ರ ಯೋಗ ಶಕ್ತಿಯನ್ನು ಹರಣ ಮಾಡುವವರಲ್ಲ.

ನಿರಂತರವಾಗಿ ಸಾಧನಾ ಬಲದಿಂದ ಪ್ರಾಪ್ತವಾದ ಯೋಗ ಶಕ್ತಿಯನ್ನು ಆ ತಾಯಿಗೇ ಮಿಸಲಾಗಿಡಬೇಕು. ಅವಧೂತ ಕೊಂಡಪ್ಪಜ್ಜ ಗುರುಗಳು ಚಿದಾನಂದನಿಗೆ ಹಲವು ಬಾರಿ ಮಾರ್ಗದರ್ಶನ ಮಾಡುತ್ತಾ ಹೇಳುತ್ತಿದ್ದರು.ಭೂತ, ವರ್ತಮಾನ, ಭವಿಷ್ಯತ್ ಕಾಲದಲ್ಲಿ ನಡೆಯುವುದೆಲ್ಲಾ ಈಶ್ವರೀ ಸಂಕೇತವಾಗಿರುತ್ತದೆ. ಅದನ್ನು ತಪ್ಪಿಸಲು ಸಾಧ್ಯವಿಲ್ಲಾ. ತಪ್ಪಿಸುವ ಪ್ರಯತ್ನ ಮಾಡಲೇ ಬಾರದು ಎಂದು ಚಿದಾನಂದನಿಗೆ ಹಲವು ಬಾರಿ ಎಚ್ಚರಿಸಿದ್ದರು.

ಜಗತ್ತಿನಲ್ಲಿ ಜನಿಸಿದ ಜೀವಿಗಳೆಲ್ಲಾ ತಮ್ಮ ತಮ್ಮ ಪ್ರಾರಬ್ಧ ಕರ್ಮದಡಿಯಲ್ಲಿ ಜೀವಿಸುತ್ತಾರೆ. ಎಂಬುದು ಪರಮ ಸತ್ಯ.”ಬಾರದು ಬಪ್ಪದು, ಬಪ್ಪದು ತಪ್ಪದು” ಅರಿವನ್ನು ಜಾಗ್ರತೆ ಮಾಡಿಕೊಂಡವ ಮಾತ್ರ ಶಿವನಾಗಬಲ್ಲನು ಇಲ್ಲವಾದೊಡೆ ಮಾನವ ಜೀವಂತ ಶವ. ತಾವು ಗಳಿಸಿಕೊಂಡ ಯೋಗ ಶಕ್ತಿಯನ್ನು ಧರ್ಮದ ಏಳಿಗೆಗಾಗಿ ಸಮಾಜದ ಉದ್ದಾರಕ್ಕಾಗಿ ಬಳಸಬೇಕು.ತನ್ನ ಶಕ್ತಿಯನ್ನು ಯಾವುದೇ ಮಹಾನ್ ಯೋಗಿ ಪ್ರದರ್ಶನ ಮಾಡಲಾರನು. ಶಕ್ತಿಯು ಆತ್ಮ ದರ್ಶನಕ್ಕೆ – ಪ್ರದರ್ಶನಕ್ಕೆ ಅಲ್ಲಾ.ಚಿದಾನಂದನಿಗೆ ಅದರ ಸ್ಪಷ್ಟ ಅರಿವಿತ್ತು. ಗುರುಗಳ ಇರುವಿಕೆ ಲಕ್ಷಣವನ್ನು ಅವನು ಅಳವಡಿಸಿಕೊಂಡಿದ್ದನು.ಗುರುಗಳು ಪೂರ್ಣ ತುಂಬಿದಕೊಡವಾಗಿದ್ದರು ಹೇಳಿದುದನ್ನು ಮಾಡುವವರು. ಭಾಷಣ, ಮಾತು ಕಡಿಮೆ ತುಂಬಿದ ಕೊಡ ಯಾವ ಕಾರಣಕ್ಕೂ ತುಳುಕುವುದಿಲ್ಲಾ.

(ಮುಂದುವರಿಯುವುದು)

ಸಂಗ್ರಹ ಸ್ವಾಮಿ ವಿಜಯಾನಂದರು

ಮೂಲ ಕೃತಿ S.V. ಪಾಟೀಲ ಗುಂಡೂರ ಅವರ “ರಾಜಯೋಗಿ ಶ್ರೀ ಚಿದಾನಂದ ಅವಧೂತರು”.

ಸಂಕಲನ:ಸಿದ್ಧಾರೂಢ ಹಿರೇಮಠ, ನಿತ್ಯಾನಂದ ಧ್ಯಾನ ಮಂದಿರ, ಬೇವಿನಕೊಪ್ಪ.

Share it with the world ~