ಜಂಕಪ್ಪನನ್ನು ತಮ್ಮನೆಂದು ಅವನ ಅಕ್ಕನೆಂದು ಅಕ್ಕರೆಯಿಂದ ಕರೆದ ಲಕ್ಷ್ಮವ್ವ ಸಾಮಾನ್ಯಳಾಗಿರಲಿಲ್ಲಾ ಆಕೆ ಸಾಕ್ಷಾತ ದೇವಿಯೇ ಆಗಿದ್ದಳು. ಎಂಬುದು ಜಂಕಪ್ಪನಿಗೆ ತಿಳಿಯಲಿಲ್ಲಾ.ಜಂಕಪ್ಪ ನಿನಗಿನ್ನು ಲೌಕಿಕ ಸಂಬಂದಗಳಿಲ್ಲಾ ನಿನ್ನ ಅಣ್ಣಂದಿರು ದುಡಿದು ತಿನ್ನುತ್ತಿದ್ದಾರೆ. ಯಾವ ಬಾಹ್ಯ ಭವ ಬಂಧನಗಳು ನಿನಗಿಲ್ಲಾ ತಡಮಾಡದೇ ನೀನು ಗುರು ಸೇವೆಯಲ್ಲಿ ತೊಡಗು ನೀನು ಸಾಮಾನ್ಯನಲ್ಲಾ ನಿನ್ನ ಪೂರ್ವ ಜನ್ಮದಲ್ಲಿ ಮುನಿ ಶ್ರೇಷ್ಟವಾದ ಕಪಿಲ ಮುನಿಯು ಕಾಮ, ಕ್ರೋದ, ಲೋಭ, ಮೋಹ, ಮದ ಮತ್ಸರಗಳನ್ನು ಕಟ್ಟಿ ಹಾಕಿ ಅವುಗಳ ಮೇಲೆ ಬ್ರಹ್ಮಾನಂದವನ್ನು ಅನುಭವಿಸುತ್ತಾ ಪರಬ್ರಹ್ಮ ಸ್ಥಿತಿಯಲ್ಲಿ ಬ್ರಹ್ಮ ಚಿಂತನೆಯಲ್ಲಿರುವ ಸಮಯದಲ್ಲಿ ಕಪಿಲ ಮುನಿಯ ಕಣ್ಣಿನಿಂದ ಆನಂದಾಶ್ರುಗಳು ಉರುಳಿದವು. ಅವನ ಕಣ್ಣುಗಳಿಂದುದುರಿದ ಅಶ್ರು ಬಿಂದುಗಳಿಂದ ಜನಿಸಿದವನು ನೀನು – ಆನಂದಾಶ್ರು ಗಳಿಂದ ಜನಿಸಿದುದರಿಂದ ನಿನಗೆ ಆನಂದಶ್ರುಜವೆಂದು ಕರೆದರು.ನೀನು ಮುನಿ ಶ್ರೇಷ್ಟ ನೆನಸಿಕೊಂಡೆ ಕಪಿಲ ಮುನಿಗಳ ಬಳಗವು ನಿನಗೊಂದು ಆಶ್ರಮವನ್ನು ನಿರ್ಮಿಸಿ ಕೊಟ್ಟಿತ್ತು. ಅಲ್ಲಿ ನೀನು ಜಪ – ತಪ ಅತಿಥಿ ಸತ್ಕಾರ ಅನುದಿನವೂ ಬಿಡದೆ ಮಾಡುತ್ತಿದೆ.ಹೀಗಿರಲು ಒಂದು ದಿನ ಬ್ರಾಹ್ಮಣಾವಧೂತನೆಂಬ ಓರ್ವ ಸಿದ್ದಿ ಪುರುಷನು ಆಶ್ರಮಕ್ಕೆ ಭೀಕ್ಷಾಂ ದೇಹಿ ಎಂದು ಬರಲು ಅಗ ಆತನನ್ನು ತಡೆದ ನೀನು ನಾಳೆ ಬಾ ಎಂದು ಹೇಳಿದೆ.
ಅವನು ಹಾಗೇ ಆಗಲಿ ಎಂದು ನಿನ್ನ ಆಶ್ರಮದ ಬಿಲ್ವ ವೃಕ್ಷದ ಬಳಿ ಸಮಾಧಿಸ್ತನಾಗಿ ಕುಳಿತು ಬಿಟ್ಟನು.ಅವನು ಸಮಾಧಿಸ್ತನಾಗಿದ್ದು ತಿಳಿಯದೆ ಭೋಜನಕ್ಕೆ ಬಾ ಎಂದು ಅವನನ್ನು ಎಬ್ಬಿಸಿದೆ ಅವನ ಸಮಾಧಿಗೆ ಭಂಗ ಬಂದಿತು. “ಇದೇನು ಆನಂದಾಶ್ರು ನನ್ನ ಸಮಾಧಿಗೆ ಭಂಗ ತರಬಹುದೇ. ಎಂದಾಗ , ಇದು ನಾನು ಅರಿಯದ ಸಮಾಧಿಯೇ? ಎಂದು ಆನಂದಾಶ್ರು ನಕ್ಕಾಗ- ಬ್ರಾಹ್ಮಣಾವಧೂತನು ಕುಪಿತನಾಗಿಎಲೈ ಅಹಂಕಾರಿಯೇ? ಹೀಗೆ ಸಮಾಧಿಯ ವಿಷಯವಾಗಿ ಹಗುರವಾಗಿ ಮಾತನಾಡುವ ನೀನು ಮುನಿ ಶ್ರೇಷ್ಟನಾಗಲಾರೆ- ನಿನಗೆ ಅನೇಕ ಜನ್ಮ ಪ್ರಾಪ್ತವಾಗಲಿ. “ಸತತಂ ಜನನಂ, ಸತತಂ ಮರಣಂ” ಎಂದು ಶಾಪ ನೀಡಿದನು.ಮುನಿಪುಂಗವಾ ಅರಿಯದೆ ತಪ್ಪು ಮಾಡಿದೆ ದಯವಿಟ್ಟು ಮನ್ನಿಸು, ಎಂದು ಬಹುವಿಧದಿಂದ ಪ್ರಾರ್ಥನೆ ಮಾಡಿ ಶಾಪ ವಿಮೋಚನೆ ಮಾಡುವಂತೆ ಬೇಡಿದನು. ಆಗಲಿ ನಿನಗೆ ಕ್ಷಮೆಯುಂಟು ಕೆಲ ಜನ್ಮಗಳ ಬಳಿಕ ನಿನಗೆ ಅಂತಪ್ಪ ಸದ್ಗುರುವಿನ ಕೃಪೆಯಾಗುವಂತೆ ಸಾಕ್ಷಾತ ಮಹಾ ಶಕ್ತಿ ಕೃಪೆ ಮಾಡುವಳು – ಎಂದು ಹೇಳಿದರು. ಈಗ ನೀನು ಪವಿತ್ರವಾಗಿ ಜನ್ಮಕ್ಕೆ ಬಂದಿರುವೆ ನೀನು ಕೂಡಲೇ ಗುರುವನ್ನು ಹುಡುಕು ಎಂದು ಹೇಳಿ ಲಕ್ಷ್ಮಿ ಭರಭರನೆ ನಡೆದಳು.ಈ ಹಿಂದೆ ಎಷ್ಟೇ ಸಮಯ ಜತೆಯಲ್ಲಿದರೂ ಇಂತಹ ಜನ್ಮಾಂತರದ ರಹಸ್ಯವನ್ನು ಲಕ್ಕವ್ವ ಹೇಳಿರಲಿಲ್ಲಾ ಸಾಮಾನ್ಯ ಕುಟುಂಬದ ಈ ಸ್ತ್ರೀಯ ಬಾಯಿಂದ ಬದುಕಿನ ಜೀವನ ಸಾಪಲ್ಯದ ಪದಪುಂಜಗಳು ಹಾಗೂ ಹಿಂದಿನ ಜನ್ಮದ ರಹಸ್ಯ ಆಕೆಗೆ ಹೇಗೆ ತಿಳಿದವು?ಜಂಕಪ್ಪನಿಗೆ ಅರ್ಥವಾಯಿತು ಹಳೆಯ ಊರಿನ ಕಂಬದಿಂದ ಬರುತ್ತಿದ್ದ. ಶಕ್ತಿಯೇ ಲಕ್ಷ್ಮವ್ವ.ಇಷ್ಟೆಲ್ಲಾ ಹೇಳಿ ಲಕ್ಷ್ಮವ್ವ ಪೂರ್ವದಿಕ್ಕಿನ ಕಡೆಗೆ ಹೋಗಿ ಅದೃಶ್ಯಳಾದಳು. ಜಂಕಪ್ಪನ ಕಣ್ಣುಗಳಿಂದ ಆನಂದಾಶ್ರುಗಳು ಸುರಿದವು.ಹೇತಾಯಿ, ಲಕ್ಷ್ಮವ್ವ ನೀನೆ ಜಗಜ್ಜನನಿ, ಜಗನ್ಮಾತಾ, ನೀನೇ ಭಗಳಾ ಮುಖಿ ಯೋಗಿ ವರೇಣ್ಯರಿಗೂ ಒಲಿಯದ ನೀನು ಈ ಪಾಮರನಿಗೆ ಹೇಗೆ ಒಲಿದೆ.ಆಕೆಯ ಆದೇಶದಂತೆ ಜಂಕಪ್ಪ ಅಯೋಧ್ಯ ಗ್ರಾಮದ ಹೊರವಲಯದಲ್ಲಿದ್ದ ಶ್ರೇಷ್ಟ ಗುರು ಕೊಂಡಪ್ಪಜನವರ ನಿವಾಸದ ಕಡೆ ಹೊರಟನು.
(ಮುಂದುವರಿಯುವುದು)
ಸಂಗ್ರಹ ಸ್ವಾಮಿ ವಿಜಯಾನಂದರು,ಮೂಲ ಕೃತಿ S.V. ಪಾಟೀಲ ಗುಂಡೂರ ಅವರ “ರಾಜಯೋಗಿ ಶ್ರೀ ಚಿದಾನಂದ ಅವಧೂತರು”. ಸಂಕಲನ:ಸಿದ್ಧಾರೂಢ ಹಿರೇಮಠ, ನಿತ್ಯಾನಂದ ಧ್ಯಾನ ಮಂದಿರ, ಬೇವಿನಕೊಪ್ಪ.