ರಾಜಯೋಗಿ ಚಿದಾನಂದ ಅವಧೂತರು Chapter 3

ಅಧ್ಯಾಯ 3- ಗುರುಗಳ ಹುಡುಕಾಟ!


ಜಂಕಪ್ಪ ತಂದೆ ತಾಯಿ ಅಣ್ಣಂದಿರ ಜೊತೆ ಪೆದ್ದ ಹರಿವಾಣದಿಂದ ತುಂಗಾನದಿ ತೀರದ ಅಯೋದ್ಯಾ ಗ್ರಾಮಕ್ಕೆ ಬರುತ್ತಾರೆ ಹನುಮನುದಿಸಿದ ನಾಡಿಗೆ ಬಂದರು.
ಊರ ಸುತ್ತಲೂ ಸುಂದರವಾದ ಕೋಟೆ ಊರ ನಡುವೆ ಪಂಪಾಪತಿ ದೇವಸ್ಥಾನ ಬದಿಯಲ್ಲಿ ಉಡುಚಲಮ್ಮಾ ದೇವಸ್ಥಾನ ಆಂಜನೇಯ, ಶ್ರೀರಾಮ ದೇವಾಲಯ .
ಒಂದು ಎತ್ತಿನ ಗಾಡಿಯಲ್ಲಿ ಬಂದು ಊರಿನ ಓಲೆಕಾರನ ಸಹಾಯದಿಂದ ಸುಲಭದ ಬಾಡಿಗೆ ಮನೆಯಲ್ಲಿ ವಾಸಮಾಡುತ್ತಾ- ಕಬ್ಬು ಕಡಿದು ಬೆಲ್ಲ ಮಾಡುವ ಕಾಯಕದಲ್ಲಿ ತೊಡಗಿದರು.
ಜಂಕಪ್ಪನಿಗೆ ಹೊಟ್ಟೆಯ ಹಸಿವಿಗಿಂತ ನೆತ್ತಿಯ ಹಸಿವು ಹಿಂಗದೆ ಹೋದಾಗ (ನೆತ್ತಿಯ ಹಸಿವು ಎಂದರೆ ಜ್ಞಾನದ ಬಗ್ಗೆ ಚಿಂತನೆ) ತಂದೆ ತಾಯಿ ವೃದ್ಧಾಪ್ಯದಿಂದ ಮರಣವಪ್ಪಿದರು- ಜಂಕಪ್ಪ ಬಂಧನದಿಂದ ಮುಕ್ತನಾದ. ಭೂಮಿಯೇ ಹಾಸಿಗೆ ಆಕಾಶವೇ ಅವನಿಗೆ ಹೊದಿಕೆಯಾಗಿತ್ತು.
ಒಂದು ದಿನ ಬನ್ನಿ ಮರದ ಕಟ್ಟೆಯ ಮೇಲೆ ಧ್ಯಾನಾಸಕ್ತನಾಗಿ ಜಂಕಪ್ಪ ಕುಳಿತಿರಲು ಹೊಳೆಯಲ್ಲಿ ಒಬ್ಬ ಹೆಣ್ಣು ಮಗಳ ಬಿಂದಿಗೆ ಜಾರಿ ನದಿಯಲ್ಲಿ ತೇಲುತ್ತಾ ಸಾಗಿತ್ತು.
ಇದನ್ನು ಅರಿತ ಜಂಕಪ್ಪ ನದಿಯಲ್ಲಿ ಈಜುತ್ತಾ ಬದಿಗೆಯನ್ನು ಹಿಡಿದು ತಂದು “ಅಕ್ಕಾ ನಿನ್ನ ಕೊಡ ಸಿಕ್ಕಿತು ತಗೋ ಎಂದು ಕೊಡುತ್ತಾನೆ. ಆಕೆ ಊರಿನ ಓಲೆಕಾರನ ಮಗಳು ಲಕ್ಷ್ಮಿ, ಎಂದು ತಿಳಿಸಿದಳು. ಅಂದೇ ಸಾಯಂಕಾಲ ಬುತ್ತಿ ಕಟ್ಟಿಕೊಂಡು ಜಂಕಪ್ಪನಿಗೆ ಊಟ ನೀಡಿದಳು.
ಇದನ್ನೇಕೆ ತಂದೆಯಮ್ಮಾ? ಎಂದು ಕೇಳಿದಾಗ. ನೀನು ಆಕಾಶ ಭೂಮಿಯನ್ನಷ್ಟೇ ತೋರಿಸಿದಿಯಲ್ಲಾ- ಅವರೊಂದಿಗೆ ನಾನು ಒಬ್ಬ ನಿನ್ನ ಅಕ್ಕ ತಗೋ ಊಟ ಮಾಡು ಎಂದಳು ಹೀಗೆ ದಿನಾ ಜಂಕಪ್ಪನಿಗೆ ಆಕೆ ಊಟ ನೀಡ ತೊಡಗಿದಳು.
ಒಂದು ದಿನ ಊಟ ನೀಡಿದ ಬಳಿಕ ಆತನ ಮುಂದಿನ ಗುರಿಯ ಬಗ್ಗೆ ಆಕೆ ಪ್ರಶ್ನಿಸಿದಳು. ತಾನು ಗುರು ಕರುಣೆಗಾಗಿ ಕಾದಿರುವುದಾಗಿ ಆತ ತಿಳಿಸಿದಾಗ, ಲಕ್ಷ್ಮಿ ಗಹಗಹಿಸಿ ನಗುತ್ತಾಳೆ- ಅಲ್ಲಪ್ಪಾ ಗುರು ಕರುಣೆ ಹೀಗೆ ಏಕಾಂಗಿಯಾಗಿ ಹೊಳೆಯ ದಂಡೆಯ ಮೇಲೆ ಕಣ್ಣು ಮುಚ್ಚಿ ಕುಳಿತರೆ ಲಭಿಸುವುದುಂಟೇ ?
ಈ ಊರಲ್ಲಿ ಕೊಂಡಪ್ಪ ಗುರುಗಳು ಅಸಮಾನ್ಯರು ಅಂತಹ ಗುರುಗಳು ದುರ್ಲಭ ನೀನು ಅವರ ಬಳಿ ಸಾಗು ಅವರು ಮಹಾನ್ ಯೋಗಿ ಅವಧೂತರು ತಂದೆ ತಾಯಿ ಸೇವೆ ಮಾಡಿ ಮುಗಿಸಿದ್ದಿ ವಿಳಂಬಗೈಯದೆ ಗುರು ಸೇವೆ ಮಾಡಿ ಬ್ರಹ್ಮ ವಿದ್ಯೆ ಸಂಪಾದಿಸು.
ಆಲಸ್ಯಂ ಅಮೃತಂ ವಿಷಂ ಎಂದು ಹೇಳುತ್ತಾ- ಅವನ ಹಿಂದಿನ ಜನ್ಮದ ವೃತ್ತಾಂತಗಳನ್ನು ಲಕ್ಷ್ಮವ್ವ ಹೇಳ ತೊಡಗಿದಳು.

ಸಂಗ್ರಹ ಸ್ವಾಮಿ ವಿಜಯಾನಂದರು, ಮೂಲ ಕೃತಿ S.V. ಪಾಟೀಲ ಗುಂಡೂರ ಅವರ “ರಾಜಯೋಗಿ ಶ್ರೀ ಚಿದಾನಂದ ಅವಧೂತರು”. ಸಂಕಲನ:ಸಿದ್ಧಾರೂಢ ಹಿರೇಮಠ, ನಿತ್ಯಾನಂದ ಧ್ಯಾನ ಮಂದಿರ, ಬೇವಿನಕೊಪ್ಪ.

Share it with the world ~