ಒಂದು ದಿನ ಗುರುಗಳು ಚಿದಾನಂದನನ್ನು ಕರೆದು.”ನೀನು ಸದ್ಯ ನನ್ನ ಮಾತನ್ನು ಪಾಲಿಬೇಕಾಗಿದೆ”. ಎಂದರು.”ಅಪ್ಪಣೆಯಾಗಲಿ ಗುರುದೇವಾ,ಶಿರಾಸಾವಹಿಸಿ ಪಾಲಿಸುವೆ” ಎಂದಾಗ. ನೀನು ಕೂಡಲೇ ಕ್ಷೇತ್ರ ಸಂಚಾರಕ್ಕೆ ಪರಿವ್ರಾಜಕನಾಗಿ ತೆರಳಲು ಸಿದ್ದನಾಗು- ಎಂದಾಗ, ಬೇಸರಿಸಬೇಡಾ ನಿನ್ನ ಗುರುಸೇವೆ, ಯೋಗ ಸಾಧನೆ, ಶಾಸ್ತ್ರಾಭ್ಯಾಸ ಪೂರ್ಣಗೊಂಡಿದೆ.”ಗುರು ಸನ್ನಿಧಿಯಲ್ಲಿ ಹಲವಾರು ಜನ್ಮ ಕೋಶ ಓದಿ ಅನುಭವ ಪಡೆದ ಬಳಿಕ ದೇಶ ತಿರುಗಿ ಅನುಭಾವ ವೃದ್ಧಿಸಿಕೊಳ್ಳಬೇಕು. ಇವೆರಡೂ ಒಂದೇ ನಾಣ್ಯದ ಎರಡು ಮುಖ ಇದ್ದಂತೆ.
ಗ್ರಂಥಗಳ ಅದ್ಯಯನದಿಂದ ಹಾಗೂ ಮನೋವಿಕಾಸವಾದರೆ, ಕ್ಷೇತ್ರ ದರುಶನ ಹಾಗೂ ಅಧ್ಯಯನದಿಂದ ಮನಾನಂದವಾಗುತ್ತದೆ. ಗುರುವಾಜ್ಞೆ ಪಾಲಿಸಿ ಚಿದಾನಂದ ಹೊರಟನು.ಪ್ರಥಮ ” ಜೋಗಳಾಂಬಿಕಾ ದೇವಿಯ ಜಾಗ್ರತ ಸ್ಥಾನಕ್ಕೆ ತೆರಳಿ. ಶ್ರೀ ಶೈಲ, ಅಕ್ಕ ಮಹಾದೇವಿಯ ಐಕ್ಯ ಸ್ಥಳ, ಕದಳೀವನ ಅಲ್ಲಿ ಸಾಧನೆ ಮಾಡಿ ಅಲ್ಲಮಪ್ರಭುವಿನ ಸ್ಥಾನ ಬಳಿಕ ಮಹಾನಂದಿ ನರಸಿಂಹ ದೇವರ ಭದ್ರಾಚಲ, ತಿರುಪತಿ, ಕಾಳಹಸ್ತಿ ಕಂಚಿಕಾಮಾಕ್ಷಿ , ಚಿದಂಬರ ದೇವಸ್ಥಾನ, ಕುಂಭಕೇಶ್ವರ, ಕುಂಭ ಕೋಣಂ, ಅರುಣಾಚಲಂ, ರಾಮೇಶ್ವರ, ಶೃಂಗೇರಿ, ಗೋಕರ್ಣ ಎಲ್ಲವನ್ನು ರೈಲುಗಾಡಿ ವಾಹನ ಏರದೇ ಪಾದಯಾತ್ರೆಯ ಮೂಲಕ ದರುಶನ ಮಾಡಿ ಬಳಿಕ ಹಂಪಿಯ ವಿರೂಪಾಕ್ಷ ಸನ್ನಿಧಿಗೆ ಬಂದನು. ಅದು ತನ್ನ ಗುರುವಿನ ಗುರು ಶಿವಾನಂದ ರಾಜಯೋಗಿಯ ಸ್ಥಾನವಾಗಿತ್ತು. 771 ವರ್ಷ ಜೀವಿಸಿದ ಗುರುವಿನ ಸಮಾಧಿ ಹಾಗೂ ಗುಹೆಯಲ್ಲಿ ಸಾಧನೆ ಮಾಡಿ. ವಂದಿಸಿ ಮರಳಿ ಅಯೋದ್ಯಗೆ ಬಂದನು.ಮರಳಿ ಆಶ್ರಮಕ್ಕೆ ಬಂದನು. ತೀರ್ಥ ಕ್ಷೇತ್ರಗಳ ದರುಶನದಿಂದ ಚಿದಾನಂದನಲ್ಲಿ ಯಾವ ಬದಲಾವಣೆಯೂ ಆಗಲಿಲ್ಲಾ. ಇದು ಮೊದಲೇ ಸದ್ಗುರುವಿಗೆ ತಿಳಿದಿತ್ತು. ಆದರೆ ಹಲವಾರು ಋಷಿ ಮುನಿಗಳ ದರುಶನ ಆಶೀರ್ವಾದದಿಂದ ಗುರುಭಕ್ತಿ ಅವನಲ್ಲಿ ಅಧಿಕಗೊಂಡಿತ್ತು.
“ಚಿದಾನಂದಾ ಕ್ಷೇತ್ರ ದರುಶನದಿಂದ ನಿನಗೇನು ಪ್ರಾಪ್ತಿಯಾಯಿತು”? ಎಂದು ಕೇಳಿದಾಗ.”ಏನು ಹೇಳಲಿ ಗುರುದೇವಾ, ಇಲ್ಲಿ ಇದ್ದಂಥಹ ಜನರೇ ಅಲ್ಲಿಯೂ ಇದ್ದಾರೆ. ಗುರು ಸಾನಿಧ್ಯದಲ್ಲಿದ್ದು ನನ್ನೊಳಗೆ ನಾನು ತಿರುಗುವುದು ಉತ್ತಮವೆಂಬ ಜ್ಞಾನವಾಯಿತು. ಗುರು ತಿಳಿಸುವ ಜ್ಞಾನಕ್ಕಿಂತ- ತಿರುಗಾಡಿದರೆ ಏನೂ ಸಿಗುವುದಿಲ್ಲ- ಎಂಬ ಜ್ಞಾನವಾಯಿತು. ರಾತ್ರಿ ಎಲ್ಲಾ ತಾನೂ ಬರೆದ ಬಗಳಾಮುಖಿಯ ಹಾಡು ಗುರುಗಳ ಮುಂದೆ ಅವರ ಅಪ್ಪಣೆಯಂತೆ ಹಾಡುತ್ತಾ, ಊರ ಜನರಿಗೆ ತನ್ನ ಕ್ಷೇತ್ರ ದರುಶನದ ಕುರಿತು ಅದ್ಭುತವಾಗಿ ಪ್ರವಚನ ಮಾಡತೊಡಗಿದನು.ಇತರ ಶಿಷ್ಯರು ಆತನಿಗೆ ಊಟ ನೀಡದೆ, ಕಾಡ ತೊಡಗಿದಾಗ ಅದು ಕೂಡಾ ಗುರುವಿನ ಮಹಿಮೆ ಎಂದು ಆತ ಅದನ್ನು ಸಹಿಸಿಕೊಂಡು. ಗುರು ಸೇವೆಯಲ್ಲಿ ಸಾಧನೆಯಲ್ಲಿ ತೊಡಗಿದನು.
(ಮುಂದುವರಿಯುವುದು)
ಸಂಗ್ರಹ: ಸ್ವಾಮಿ ವಿಜಯಾನಂದರು,ಮೂಲ ಕೃತಿ S.V. ಪಾಟೀಲ ಗುಂಡೂರ ಅವರ “ರಾಜಯೋಗಿ ಶ್ರೀ ಚಿದಾನಂದ ಅವಧೂತರು”. ಸಂಕಲನ:ಸಿದ್ಧಾರೂಢ ಹಿರೇಮಠ, ನಿತ್ಯಾನಂದ ಧ್ಯಾನ ಮಂದಿರ, ಬೇವಿನಕೊಪ್ಪ.