ಬಗಾಳಾಮುಖಿ ದೇವಿಯ ಉಪಾಸನೆ ಮಾಡುತ್ತಾ ಅವಧೂತ ಸ್ಥಿತಿ ತಲುಪಿ, ದೇವಿ ಪುರಾಣ ಹಾಗೂ “ಜ್ಞಾನಸಿಂಧು” ಗ್ರಂಥಗಳನ್ನು ಕನ್ನಡದಲ್ಲಿ ರಚಿಸಿದ ಮಹಾತ್ಮರು ಚಿದಾನಂದ ಅವಧೂತರು.
ಕಲಿಯುಗದ ಚಿಂತಾಮಣಿ ಎಂದು ದೇವಿ ಪುರಾಣ ಪ್ರಸಿದ್ದವಾದರೆ, ಜ್ಞಾನ ರತ್ನವೆಂದು “ಜ್ಞಾನಸಿಂಧು” ಗ್ರಂಥ ಜಗತ್ಪ್ರಸಿದ್ದ ಗ್ರಂಥವೆಂದು ಜ್ಞಾನಿಗಳಿಂದ ವಿಮರ್ಶಿಸಲ್ಪಟ್ಟಿದೆ.
ಚಿದಾನಂದಾವಧೂತರ ಜೀವನ ಚರಿತ್ರೆ ಎಲ್ಲಿಯೂ ಲಭ್ಯವಿಲ್ಲಾ, ಎಸ್. ವಿ. ಪಾಟೀಲ್ ಗುಂಡೂರುರವರು “ರಾಜಯೋಗಿ ಶ್ರೀ ಚಿದಾನಂದ ಅವಧೂತರು ಗ್ರಂಥ ರಚಿಸಿರುತ್ತಾರೆ, ಅವರು ಕನ್ನಡ ರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದರು.
ಒಮ್ಮೆ ಕನಕಗಿರಿಯ ಏಳನೇ ಪಾಳೆಯಗಾರನಾದ ಹಿರೇ ರಂಗಪ್ಪ ನಾಯಕನು ಧ್ಯಾನಸಕ್ತರಾಗಿ ಕುಳಿತ ಅವಧೂತ ಮಹಾನ್ ಯೋಗಿ ಚಿದಾನಂದ ಅವಧೂತರ ದರುಶನ ಪಡೆಯಲು ಬಂದಾಗ, ಕೇಳುತ್ತಾನೆ.
ಪೂಜ್ಯರೇ? ತಂದೆಯೇ? ತಾವು ಸಶರೀರಿಯಾಗಿ ಸಮಾಧಿ ಹೊಂದುವಿರಿ ಎಂಬ ವಾರ್ತೆ ಕೇಳಿ ಬಂದೆ? ಎಂದಾಗ. “ಹೌದು ಅದು ನಾಳೆಯೇ? ಎನ್ನುತ್ತಾರೆ. ಹೌದು ನಾನು ಸಮಾಧಿಯಾದ ಬಳಿಕ ನಿನ್ನ ಎರಡು ತಲೆಮಾರಿನ ಬಳಿಕ ” ಹುಲಿ ಹೈದರ ಎಂಬ ನಾಯಕರು ಬರುತ್ತಾರೆ. ನಿನ್ನ ಮೊಮ್ಮಗ ಹಿರೇ ನಾಯಕ ಕನಕಗಿರಿಯ ಕೊನೆಯ ದೊರೆ ಎನಿಸಿಕೊಳ್ಳುತ್ತಾನೆ.
ಬಳಿಕ ಪೂಜ್ಯ ಚಿದಾನಂದ ಅವಧೂತರು ಹೀರೆರಂಗಪ್ಪ ನಾಯಕರಿಗೆ ಹೇಳುತ್ತಾರೆ. ನಿನ್ನ ಸಂತಾನ ಕನಕ ಗಿರಿಯಲ್ಲಿ ಮುಂದುವರಿಯ ಬೇಕಾದರೆ ಸ್ವತಃ ತನ್ನ ಅಂದರೆ (ಚಿದಾನಂದ ಅವಧೂತರು) ಶರೀರವನ್ನು ತುಂಡಾಗಿ ಕಡಿದು ಕೋಟೆಯ ಸುತ್ತಲೂ ಚರಗ ಚೆಲ್ಲುವಂತೆ ಚೆಲ್ಲಿ ಬಿಡು ಎನ್ನುತ್ತಾರೆ.
ತನ್ನ ಸಿಂಹಾಸನ ಹೋದರು ಪರವಾಗಿಲ್ಲ ನಮ್ಮ ವಂಶ ನಾಶವಾದರು ಪರವಾಗಿಲ್ಲಾ ರಾಜಯೋಗಿ ಅವಧೂತರಾದ ತಮ್ಮನ್ನು ಕಡಿದು ಚೆಲ್ಲಲಾರೆ ಎನ್ನುತ್ತಾರೆ.
ಹೀಗೆಯೇ ಕೊನೆಗೆ ಚಿದಾನಂದ ಅವಧೂತರು 1781ನೇ ಸುಮಾರಿಗೆ ಸ್ಥಿರ ಸಮಾಧಿ ಪಡೆಯುತ್ತಾರೆ. ಹಿರೇ ರಂಗಪ್ಪನಾಯಕನು ಪೂಜ್ಯ ಚಿದಾನಂದ ಅವಧೂತರ ಸಮಾಧಿಯನ್ನು ಕನಕಾಚಲಪತಿ ಸ್ವಾಮಿಯ ಗುಡಿಯ ಆಗ್ನೇಯ ದಿಕ್ಕಿನಲ್ಲಿ ವಿಶಾಲವಾದ ಪ್ರದೇಶದಲ್ಲಿ ನಿರ್ಮಿಸಿರುತ್ತಾರೆ.
- Compiled by Swamy Vijayananda from the Original work of S. V. Patil Gundur, “Rajayogi Shri Chidananda Avadhootaru”
- Nityananda Dhyana Mandira Bevinkoppa