ಅಧ್ಯಾಯ 9: ಗುರೋಪದೇಶ

ಚಿದಾನಂದರ ಹಾಡುಗಾರಿಕೆ ಪ್ರವಚನಗಳಿಂದ ಜನರಿಗೆ, ಭಕ್ತಾಭಿಮಾನಿಗಳಿಗೆ ಆಕರ್ಷಣೆಯಾಗಿ ಪಕ್ಕದ ಊರುಗಳಿಗೂ ಅವನ ಪ್ರಚಾರವಾಯಿತು.ಊರ ಹಿರಿಯರು ಗುರುಗಳ ಅಪ್ಪಣೆ ಪಡೆದು ಅಯೋದ್ಯಾ ನಗರದ ನಡುವೆ ಇರುವ ಪಂಪಾ ವಿರೂಪಾಕ್ಷ ಸ್ವಾಮಿಯ ಗುಡಿಯಲ್ಲಿ ಚಿದಾನಂದರಿಂದ ಪ್ರವಚನ ಮಾಡಿಸಿದರು. ಪ್ರವಚನಕ್ಕೆ ಭಕ್ತರು ಆಕರ್ಷಿತರಾದ. ಅವಿವಾಹಿತ ಸುಂದರಿಯರು ಆಕರ್ಷಿತರಾಗಿ ಕೆಲವರು ನಮಿಸುವ ನೆಪದಲ್ಲಿ ಕುಚೇಷ್ಟೆ ಮಾಡ ತೊಡಗಿದರು.ಆದರೆ, ಚಿದಾನಂದ ಮಾತ್ರ ಯಾವುದರ ಕಡೆಗೂ ಗಮನ ಕೊಡದೆ ತನ್ನ ಚಿತ್ತವನ್ನು ಹೇಳುವ ವಿಷಯದಲ್ಲೇ ಕ್ರೋಡಿಕರಿಸುತ್ತಾ ಪ್ರವಚನ ಮಾಡುತ್ತಿದ್ದನು.ತನ್ನ ಶಿಷ್ಯನ ಮನದ ಕೊರತೆ ಬಗ್ಗೆ ಚೆನ್ನಾಗಿ ಅರಿವಿದ್ದ ಗುರುಗಳು”ಚಿದಾನಂದಾ, ಈ ರೀತಿ ಚಿತ್ತ ಚಾಂಚಲ್ಯವಾಗುವಾಗ ನೀನೇನು ಮಾಡುವಿ. ಎಂದು ಕೇಳಿದಾಗ.

“ಚಿತ್ತ ವ್ಯಾಕುಲವಾದಾಗ ಗುರುಪಾದವನ್ನು ಸ್ಮರಿಸುತ್ತೇನೆ, ಗುರುದೇವಾ? ಎಂದಾಗ.”ಭಲೇ ಚಿದಾನಂದಾ ನಿನ್ನಂತಹ ಶಿಷ್ಯನನ್ನು ಪಡೆದ ನಾವೇ ಧನ್ಯರು” ಎಂದರು.ಪ್ರತಿಯೊಬ್ಬ ಮಹಿಳೆಯನ್ನೂ ಬಗಳಾ ಮುಖಿ ಸ್ವರೂಪ ಎಂದು ತಿಳಿದು ನಡೆಯುವ ನಿನಗೆ ವಿಷಾಯಾಸಕ್ತಿಯ ಕಡೆಗೆ ಗಮನ ಹರಿಯುವುದು ಸಾಧ್ಯವಿಲ್ಲಾ. “ಮನಸ್ಸು ಮರ್ಕಟನಂತೆ ಅದನ್ನು ಕಟ್ಟುವುದು ಕಠಿಣ”.”ಮನ ಏವ ಮನುಷಾಣಾಂ””ಕಾರಣಂ ಬಂಧ ಮೋಕ್ಷಯೇ” ಎಂದು ಪದೇ ಪದೇ ಸ್ಮರಿಸುತ್ತಿರಬೇಕು. ಕೊನೆಗೆ ಗುರುಗಳು ಪ್ರವಚನ ಮಾಡಬೇಕು, ಧ್ಯಾನವನ್ನು ಮಾಡಬೇಕು.

ದಾನಗಳಲ್ಲಿ ಅನ್ನದಾನ, ವಿದ್ಯಾದಾನ, ಗೋದಾನ, ಭೂದಾನ, ವಸ್ತ್ರ ದಾನ, ಸುವರ್ಣದಾನ, ಕನ್ಯಾದಾನ, ಹೀಗೆ ಹಲವಾರು ದಾನಗಳಿವೆ. ಆದರೆ ಸರ್ವ ಶ್ರೇಷ್ಟವಾದ ದಾನವೇ ಸಮಾಧಾನ ಎಂದರು. ಎಲ್ಲಾ ಭೇದ ಬಾವ ದೂರ ಮಾಡು. ಆಗ ಮನಸ್ಸು ಇಂದ್ರಿಯಗಳ ಕಡೆ ಹೋಗುವುದಿಲ್ಲಾ.ಇಂದ್ರಿಯ ನಿಗ್ರಹವಾಗದೇ ಮನ ನಿಗ್ರಹವಾಗುವುದಿಲ್ಲಾ.ಸಹನೆ ನಮ್ಮದಾದರೆ ಸಕಲವೂ ನಮ್ಮದಾಗುವುದು. ಚಿದಾನಂದನ್ನು ಹೆಸರಿಗೆ ತಕ್ಕಂತೆ ಸತ್, ಚಿತ್ ಅನಂದದ ಸ್ಥಿತಿಯಲ್ಲಿ ಇರುತ್ತಿದ್ದನು.

(ಮುಂದುವರಿಯುವುದು)

ಸಂಗ್ರಹ ಸ್ವಾಮಿ ವಿಜಯಾನಂದರು,

ಮೂಲ ಕೃತಿ S.V. ಪಾಟೀಲ ಗುಂಡೂರ ಅವರ “ರಾಜಯೋಗಿ ಶ್ರೀ ಚಿದಾನಂದ ಅವಧೂತರು”.

ಸಂಕಲನ:ಸಿದ್ಧಾರೂಢ ಹಿರೇಮಠ, ನಿತ್ಯಾನಂದ ಧ್ಯಾನ ಮಂದಿರ, ಬೇವಿನಕೊಪ್ಪ.

Share it with the world ~