ರಾಜಯೋಗಿ ಚಿದಾನಂದ ಅವಧೂತರು- Chapter 2

Chapter 2- ಬಾಲ್ಯ ಹಾಗೂ ವಿದ್ಯಾಭ್ಯಾಸ

ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಅದವಾನಿ ತಾಲೂಕಿನಲ್ಲಿರುವ ಪೆದ್ದ ಹರಿವಾಣಂ ಎಂದು ಕರೆಯಲ್ಪಡುವ ಗ್ರಾಮದ “ಕರ್ಣಂ” ಮನೆತನ ಎಂದರೆ – ಕರಣಿಕ ಅಂದರೆ ಕಾರಕೂನ ವೃತ್ತಿ ,ಮಾಡುವ ಮನೆತನದಲ್ಲಿ ಲಕ್ಷ್ಮೀಪತಿ ಹಾಗೂ ಅಣ್ಣಮ್ಮರೆಂಬ ದಂಪತಿಗಳಿಗೆ ಒಂದು ಗಂಡು ಮಗುವಿನ ಜನನವಾಯಿತು.
ಲಕ್ಷ್ಮೀಪತಿ ಜ್ಯೋತಿಷಿ ಕೂಡಾ ಆಗಿದ್ದರು- ಮೂರನೇ ಗಂಡು ಮಗು ಜನಿಸಿದಾಗ ಆ ಮಗು ಅಳಲಿಲ್ಲ- ತಾಯಿಗೆ ಹೆರಿಗೆ ಬೇನೆಯು ಆಗಲಿಲ್ಲಾ. ಕಿಲಕಿಲ ನಗುತ್ತಿರುವ ಮಗು ಅಳಲಿಲ್ಲವಾದುದರಿಂದ ಮೂಖನಿರಬೇಕೆಂದು ಕೊಂಡರು.
ಎಳೆಂಟು ವರ್ಷ ಮಳೆಯಿಲ್ಲದೆ ಬರಗಾಲ ಪೀಡಿತ ಭೂಮಿಯಲ್ಲಿ ಹೊಸ ಮಗು ಜನನದಿಂದ ಧಾರಾಕಾರ ಮಳೆ ಸುರಿದು, ಕೆರೆ, ಹಳ್ಳ, ನದಿಗಳು ತುಂಬಿ ಹರಿದವು .
ಮಗುವಿಗೆ “ಜಂಕಪ್ಪನೆಂದು” ನಾಮಕರಣ ಮಾಡಲಾಯಿತು- ಜೋರಾಗಿ ಅವರ ತಂದೆ-ತಾಯಿ, ಬಂದುಗಳು “ಜಂಕಪ್ಪ ಕುಟ್ಟಿಟ್ಟ ಕುರ್ರ” ಎಂದು ನಾಮಕರಣ ಮಾಡಿಯೇ ಬಿಟ್ಟರು.
ಲಕ್ಷ್ಮೀಪತಿ ಮನೆ ಬದಲಿಸಬೇಕಾಯಿತು. ಹೊಸ ಮನೆಗೆ ಪ್ರವೇಶವಾಯಿತು- ಆ ಮನೆಯಲ್ಲಿ ಏಳು ಮಕ್ಕಳ ತಾಯಿ ಎಂಬ ದೇವತೆ ವಾಸಮಾಡುತ್ತಿದ್ದು, ಆ ಮನೆಯಲ್ಲಿ ಯಾರು ಉದ್ದಾರವಾಗಲಿಲ್ಲಾ- ಅಂತ ಮಂದಿ ಹೇಳಿದರೂ- ಕೇಳದೆ ಆ ಮನೆಯಲ್ಲಿ ವಾಸ ಮಾಡತೊಡಗಿದರು.
ಆ ಮನೆಯಲ್ಲಿ ಹಲವಾರು ಕಂಬಗಳಿದ್ದು ಅಡುಗೆ ಮನೆಯಲ್ಲಿ ಒಂದು ವಿಚಿತ್ರ ಕಂಬವಿತ್ತು. ಯಾರಾದರೂ ಕೆಟ್ಟ ಮಂದಿಯು ಮನೆಯೊಳಗೆ ಬಂದರೆ. ಆ ಕಂಬದಿಂದ ಬೆಂಕಿ ಚಿಮ್ಮುತ್ತಿತ್ತು. ಆ ಕಂಬಕ್ಕೆ ದಿನಾ ಪೂಜೆ ಮಾಡುತ್ತಿದ್ದರು.
ರಾತ್ರಿ ಕೆಲವೊಮ್ಮೆ ಕಂಬದಿಂದ ಬೆಳಕಿನ ಕಿರಣಗಳು ಹೊರ ಹೊಮ್ಮುತ್ತಿದ್ದವು- ಕಂಬದಿಂದ ಎರಡು ಕೈಗಳು ಹೊರಬಂದು ಬಾಲಕ ಜಂಕಪ್ಪನನ್ನು ಕರೆದು ಕೊಂಡು ಹೋಗುತಿತ್ತು. ಕಂಬದ ಬಳಿ ಬಾಲಕ ಧ್ಯಾನಸಕ್ತನಾಗುತ್ತಿದ್ದನು- ಕಂಬದಿಂದ ಬೆಳದಿಂಗಳಂತಹ ಶೀತಲ ಕಿರಣಗಳಿಂದ ಮೈ ಮರೆತು ಬಾಲಕ ಧ್ಯಾನ ಮಾಡುತ್ತಿದ್ದನು.
ಒಮ್ಮೊಮ್ಮೆ ಬಾಲಕನಿಗೆ ಮೂತ್ರ ವಿಸರ್ಜನೆಗೆ ಎಚ್ಚರವಾದಗ ತಾಯಿಯನ್ನು ಎಬ್ಬಿಸಲು ಹೋದಾಗ ಆಕೆ ಗಾಢ ನಿದ್ರೆಯಲ್ಲಿರುತ್ತಿದ್ದಳು. ಆಗ ಆ ಕಂಬದ ದೇವಿ ಕೈ ಹಿಡಿದು ಬಾಲಕನನ್ನು ಹೊರಗಡೆ ಕರೆದುಕೊಂಡು ಹೋಗುತ್ತಿದ್ದಳಂತೆ.
ಜಂಕಪ್ಪ ಅಣ್ಣನಿಂದ ಅರ್ಚಕ ವೃತ್ತಿಯ ಮಂತ್ರ ಕಲಿತನು ಅತ್ಯಂತ ವೇಗವಾಗಿ ಅವನಿಗೆ ಶಾಸ್ತ್ರ, ವೇದ, ಮಂತ್ರಗಳು- ಒಲಿಯ ತೊಡಗಿದವು.
ಅಣ್ಣ ಹೊಸ ಮಂತ್ರ ಕಲಿಸುವ ಮೊದಲೇ ಅದರ ಮುಂದಿನ ಸಾಲನ್ನು ಜಂಕಪ್ಪ ಹೇಳುತ್ತಿದ್ದ. ಅಣ್ಣ ನರಸಿಂಹನಿಗೆ ಅಚ್ಚರಿಯಾಗುತ್ತಿತ್ತು. ಬಾಲಕನ ವಿಚಿತ್ರ ಪ್ರತಿಭೆ ನಡವಳಿಕೆ ಕಂಡು ಬಾಲಗೃಹ ಬಡಿದಿರಬಹುದೆಂದು ಯಂತ್ರ, ಮಂತ್ರ ತಾಯಿತ ಕಟ್ಟುತ್ತಾರೆ, ಉಪಯೋಗವಾಗುದಿಲ್ಲಾ.
ಯಾರೂ ಕಲಿಸದಂತಹ – ಕಲಿಯದಂತಹ ಮಂತ್ರವನ್ನು ಜಂಕಪ್ಪ ಪಠಿಸುವುದು ಕಂಡು ಜಂಕಪ್ಪಾ ಇದನ್ನೆಲ್ಲಿ ಕಲಿತೆ? ಎಂದಾಗ.
“ಘನ ಮಾಯೆಯೇ ಭವ ಬಂಧನಕ್ಕೂ ಆತ್ಮ ಸಾಕ್ಷಾತ್ಕಾರಕ್ಕೆ ಕಾರಣ”- ಎಂದು ಹೇಳಿದಾಗ- “ಇವನು ಇಲ್ಲಿಯವನಲ್ಲಾ ಎಂದು ಮನೆಯವರಿಗೆ ತಿಳಿಯಿತು.
ಆ ಪವಿತ್ರ ಕಂಬದಿಂದ ಹೊರಗೆ ಬರುವ ಜ್ಯೋತಿ ವಿವಿಧ ರೂಪ ತಿಳಿಯುತ್ತಿತ್ತು. ಅಮ್ಮನಾಗಿ, ಗೆಳತಿಯಾಗಿ, ಬಾಲಕಿಯಾಗಿ ಬಂದು ಜಂಕಪ್ಪನನ್ನು ಆನಂದ ಗೊಳಿಸುತ್ತಿತ್ತು. ಅಣ್ಣನಿಂದ ಮಂತ್ರ, ತಂದೆಯಿಂದ ಜ್ಯೋತಿಷಿ, ಪುರಾಣ ಆಗಮಗಳನ್ನು ಕಲಿಯುವ ಬಾಲಕನಿಗೆ ಆಟಗಳಲ್ಲಿ ಉತ್ಸಾಹ ಇರಲಿಲ್ಲಾ.
ಜಂಕಪ್ಪ 9ನೇ ವಯಸ್ಸಿಗೆ ಬಂದಾಗ ವೇದಾಗಮ ಶಾಸ್ತ್ರ ಪುರಾಣ ಅಲ್ಲದೆ ಗಿರಿಜಾ ಕಲ್ಯಾಣ ಕಂಠ ಪಾಠ ಮಾಡಿದ್ದನು.
ಒಂದು ದಿನಾ ಶಾಂಭವಿ ದೇವಿ ಸ್ವಪ್ನದಲ್ಲಿ ಒಂದು ಗಂಗಾವತಿ ಬಳಿ ಇರುವ ಅಯೋದ್ಯೆ ಗ್ರಾಮಕ್ಕೆ ಹೋದರೆ ನಿಮ್ಮ ಬಡತನ ನೀಗುವುದೆಂದು ಆಜ್ಞೆ ಮಾಡುತ್ತಾಳೆ. ಆತ್ಮ ವಿಕಾಸಕ್ಕಾಗಿ ಒರ್ವ ಗುರುವನ್ನು ಸೇವಿಸು ಎಂದು ದೇವಿ ಆಜ್ಞೆ ಮಾಡುತ್ತಾಳೆ.

ಸಂಗ್ರಹ ಸ್ವಾಮಿ ವಿಜಯಾನಂದರು, ಮೂಲ ಕೃತಿ S.V. ಪಾಟೀಲ ಗುಂಡೂರ ಅವರ “ರಾಜಯೋಗಿ ಶ್ರೀ ಚಿದಾನಂದ ಅವಧೂತರು”.ಸಂಕಲನ:ಸಿದ್ಧಾರೂಢ ಹಿರೇಮಠ, ನಿತ್ಯಾನಂದ ಧ್ಯಾನ ಮಂದಿರ, ಬೇವಿನಕೊಪ್ಪ.

Share it with the world ~